ದುಬೈ: ಅಸ್ವಚ್ಛತೆಗಾಗಿ 94 ರೆಸ್ಟೋರೆಂಟ್‌ಗಳು ಬಂದ್

Update: 2017-07-20 15:22 GMT

ದುಬೈ, ಜು. 20: ದುಬೈ ಮುನಿಸಿಪಾಲಿಟಿಯು ವರ್ಷದ ಪ್ರಥಮಾರ್ಧದಲ್ಲಿ, ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸಿದ 94 ಆಹಾರ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿದೆ.

‘‘ಈ ಆಹಾರ ಮಳಿಗೆಗಳಿಗೆ ಸ್ವಚ್ಛತಾ ನಿಯಮಗಳನ್ನು ಪಾಲಿಸಲು ಹಾಗೂ ತಮ್ಮ ಅನಾರೋಗ್ಯಕರ ವಿಧಾನಗಳನ್ನು ಸುಧಾರಿಸಿಕೊಳ್ಳಲು ಕಿರು ಅವಧಿಯ ಕಾಲಾವಕಾಶ ನೀಡಲಾಗಿತ್ತು’’ ಎಂದು ದುಬೈ ಮುನಿಸಿಪಾಲಿಟಿಯ ಆಹಾರ ಸುರಕ್ಷತೆ ಇಲಾಖೆಯ ಆಹಾರ ತಪಾಸಣೆ ವಿಭಾಗದ ಮುಖ್ಯಸ್ಥ ಸುಲ್ತಾನ್ ಅಲ್ ತಾಹಿರ್ ಹೇಳಿದರು.

‘‘ಇದೇ ಅವಧಿಯಲ್ಲಿ, ದುಬೈಯ 1,409 ಆಹಾರ ಮಳಿಗೆಗಳು ಅತ್ಯುತ್ತಮ ದರ್ಜೆಗಳನ್ನು ಪಡೆದುಕೊಂಡಿವೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News