ಸೌದಿ: ಮೊದಲ ಹಜ್ ತಂಡಗಳ ಆಗಮನ

Update: 2017-07-25 15:59 GMT

ಮದೀನಾ (ಸೌದಿ ಅರೇಬಿಯ),ಜು. 25: ಪಾಕಿಸ್ತಾನದಿಂದ ಹಜ್ ಯಾತ್ರಿಗಳನ್ನು ಹೊತ್ತ ವಿಮಾನಗಳು ಸೋಮವಾರ ಬಂದಿಳಿಯುವುದರೊಂದಿಗೆ 2017ರ ಹಜ್ ಋತು ಆರಂಭಗೊಂಡಿದೆ.ಇಸ್ಲಾಮಾಬಾದ್‌ನಿಂದ ಹೊರಟ ಮೊದಲ ತಂಡದ 329 ಯಾತ್ರಿಕರು ಮದೀನಾದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿದರು.ಮೊದಲ ತಂಡವನ್ನು ಪಾಕಿಸ್ತಾನ್ ಹಜ್ ಸಮಿತಿಯ ಮಹಾನಿರ್ದೇಶಕ ಸಾಜಿದ್ ಯೂಸಫನಿ, ಉಪ ಕಾನ್ಸುಲ್ ಜನರಲ್ ಆಸಿಫ್ ಮೆಮನ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ಅಶ್ರಫ್ ಲಂಜ ಸ್ವಾಗತಿಸಿದರು.253 ಯಾತ್ರಿಕರನ್ನು ಹೊತ್ತ ಪಾಕಿಸ್ತಾನದ ಎರಡನೆ ವಿಮಾನ ಜಿದ್ದಾದಲ್ಲಿ ಇಳಿದಿದೆ. ದೊರೆ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಮೊದಲ ಹಜ್ ವಿಮಾನ ಇದಾಗಿದೆ.ನಾಗರಿಕ ವಾಯುಯಾನ ಮಹಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಹಕೀಮ್ ಅಲ್-ತಮೀಮಿ ಮತ್ತು ಇತರ ಸೌದಿ ಅಧಿಕಾರಿಗಳು ಯಾತ್ರಿಕರನ್ನು ಸ್ವಾಗತಿಸಿದರು.ಸೋಮವಾರ ಸುಮಾರು 1,954 ಹಜ್ ಯಾತ್ರಿಕರು ಸೌದಿ ಅರೇಬಿಯಕ್ಕೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News