ಡಾ. ಕಾಪು ಮಹಮ್ಮದ್ ರಿಗೆ ಸ್ವಿಸ್ ಡಾಕ್ಟರೇಟ್

Update: 2017-07-29 04:34 GMT

ದುಬೈ, ಜು. 28: ಅಮೆರಿಕನ್ ಸಿಟಿ ಕಾಲೇಜು ಇದರ ಡೀನ್ ಮತ್ತು ಡೈರೆಕ್ಟರ್ ಆಗಿರುವ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಮ್ (BCF) ಇದರ ಗೌ. ಕಾರ್ಯದರ್ಶಿಯೂ ಆಗಿರುವ ಡಾ. ಕಾಪು ಮುಹಮ್ಮದ್ ಅವರಿಗೆ ಇತ್ತೀಚಿಗೆ  ಕೌನ್ಸಿಲ್ ಆಫ್ ಹೈಯರ್ ಎಜುಕೇಶನ್ ಅಕ್ಕ್ರೆಡೆಷನ್ ಇದರಿಂದ ಸ್ವಿಸ್ ಕ್ವಾಲಿಟಿ ಸರ್ಟಿಫಿಕೇಷನ್ ಮತ್ತು ಇಂಟರ್ ನ್ಯಾಷನಲ್ ಅಸಂಬ್ಲಿ  ಫಾರ್ ಕಾಲೇಜಿಯೇಟ್ ಬಿಸಿನೆಸ್ ಎಜುಕೇಶನ್ (IACBE ) ಅಂಗೀಕೃತವಾದ ಸ್ವಿಜರ್ಲೆಂಡ್ ನ ಪ್ರಖ್ಯಾತ ಯೂನಿವರ್ಸಿಟಿ ಆಫ್ ಬಿಸಿನೆಸ್ ಅಂಡ್ ಇಂಟರ್ ನ್ಯಾಷನಲ್ ಸ್ಟಡೀಸ್ (UBIS ) ಜಿನೇವಾ ಇದರ ವತಿಯಿಂದ ಸ್ವಿಸ್ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಲಾಯಿತು.

UIBS ಯೂನಿವರ್ಸಿಟಿಯ ಬೋರ್ಡ್ ಆಫ್ ಡೈರೆಕ್ಟರ್ ಡಾ. ಒಕ್ಸಾನಾ ಮಲಿಶೇವಾ ಇವರು ಡಾ. ಕಾಪು ಮಹಮ್ಮದ್ ಅವರನ್ನು ಪ್ರೊ. ರಿಯಾನ್ ಖಾಓಸ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಗೌರವಿಸಿದರು. ಡಾ. ಕಾಪು  ಅವರ ಈ ಸಾಧನೆಗಾಗಿ ಯೂನಿವರ್ಸಿಟಿಯಾ ಫ್ಯಾಕಲ್ಟಿ ಮತ್ತು  ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಗಣ್ಯ ಅತಿಥಿಗಳು ಅಭಿನಂದಿಸಿದರು.

ವಿಶೇಷವಾಗಿ ದುಬೈಯ ಲಂಡನ್  ಸಿಟಿ ಕಾಲೇಜು ಇದರ ಸಹಭಾಗಿತ್ವದಲ್ಲಿ  UBIS ಯೂನಿವರ್ಸಿಟಿಯ ಯೂರೋಪಿಯನ್ ಕ್ರೆಡಿಟ್ ಮತ್ತು ಅಕ್ಯುಮಲೇಶನ್ ಸಿಸ್ಟಮ್  ( ECTS ) ಇದಕ್ಕೆ ಗಣನೀಯವಾದ ಸೇವೆ ಸಲ್ಲಿಸಿದ್ದಕ್ಕಾಗಿ ಡಾ. ಕಾಪು ಮಹಮ್ಮದ್ ಅವರನ್ನು ಈ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

ಸಾಂಸ್ಥಿಕ ಮತ್ತು ಸೈದ್ಧಾಂತಿಕ ಜ್ಞಾನದ ಅಡಿಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಪರಿಣಿತರಾಗಿರುವ ಡಾ. ಕಾಪು ಮಹಮ್ಮದ್  ಕಳೆದ ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಉನ್ನತ ವಿದ್ಯಾ ತಜ್ಞರಾಗಿರುತಾರೆ.

ಮಾಸ್ಕೋ ದಲ್ಲಿ ಇತ್ತೀಚಿಗೆ ನಡೆದ  ಯೂರೋಪಿಯನ್ ಕೌನ್ಸಿಲ್ ಫಾರ್ ಬಿಸಿನೆಸ್ ಎಜುಕೇಶನ್ ಇದರ 22ನೆ ವಾರ್ಷಿಕ ಸಮ್ಮೇಳನದಲ್ಲಿ "ಅಕ್ರೆಡಿಟೇಡ್ ಇನ್ಸ್ಟಿಟ್ಯೂಷನ್ಸ್ ಅಂಗೀಕಾರ: ಪ್ರಾಬ್ಲಮ್ ಇವಲ್ಯೂಯೇಷನ್ ಅಂಡ್ ಸೊಲ್ಯೂಷನ್ " ಎಂಬ ಪ್ರಬಂಧವನ್ನು ಮಂಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 26 ವರ್ಷ ಅನುಭವ ಮತ್ತು ಡೀನ್ ಶಿಪ್ ನಲ್ಲಿ 19 ವರ್ಷದ ಅಪಾರ ಅನುಭವವಿರುವ ಡಾ. ಕಾಪು ಮಹಮ್ಮದ್ ಅವರು ಇದುವರೆಗೆ ತಮ್ಮ ವೃತ್ತಿ ಜೀವನವನ್ನು ಅಕಡೆಮಿಕ್ಸ್, ಉಪನ್ಯಾಸ ಮತ್ತು ಸಂಶೋದನೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.

ಗ್ರಾಹಕ ಕೇಂದೀಕೃತವಾದ ಮತ್ತು ಸಹಾಯಕವಾದ 'ಗ್ರಾಹಕ ನಿರ್ವಹಣೆ ಮತ್ತು ಸಹಕಾರ' ಎಂಬ ಲೇಖನವು 'ದಿ ಒಬ್ಸರ್ವ್ರ್ ಎ ಮ್ಯಾನೇಜ್ಮೆಂಟ್ ಎಜುಕೇಶನ್' ಹಾಗೂ ಇತ್ತೀಚೀನ 'ಡೆವಲಪ್ಮೆಂಟ್ ಎ ನ್ಯೂ ಕಾನ್ಸೆಪ್ಟ್ಸ್ ಆ್ಯಂಡ್ ಪರ್ಪೊಸಸ್ ಆಡ್ ವ್ಯಾಲ್ಯೂಡ್ CRM' ಮೊದಲಾದ ಅನ್ವೇಷಣಾ ಲೇಖನಗಳು ಹಲವಾರು ಅಂತಾರಾಷ್ಟ್ರೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿವೆ.

ತನ್ನ  ಶೈಕ್ಷನಿಕ ವೃತ್ತಿಯಲ್ಲಿ ಅವರು ದೇಶ, ವಿದೇಶದ ಹಲವಾರು ವಿಶ್ವವಿದ್ಯಾಲಯಗಳಿಗೆ ಗೌ. ಉಪನ್ಯಾಸಕರಾಗಿ ಭೇಟಿ ನೀಡುತ್ತಾ ಈ ನಿಟ್ಟಿನಲ್ಲಿ ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್, ನೆದರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಮ್ಯಾಸೆಡೋನಿಯ, ಡೆನ್ಮಾರ್ಕ್, ಥೈಲ್ಯಾಂಡ್, ಶ್ರೀಲಂಕಾ, ಟರ್ಕಿ, ಸ್ಪೇನ್, ಭಾರತ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮೊದಲಾದ ದೇಶಗಳಲ್ಲಿ ತಮ್ಮ ಉಪನ್ಯಾಸವನ್ನು ನೀಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಪಟ್ಟ  ವಿವಿಧ ಕ್ಷೇತ್ರದಲ್ಲಿ ಇದುವರೆಗೆ  ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ  ಡಾಕ್ಟರೇಟ್ ಮತ್ತು Phd ಪಡೆದು ಕೊಂಡಿರುವ ಬ್ಯಾರಿ ಸಮುದಾಯದ ವ್ಯಕ್ತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News