ಮಕ್ಕಾ ಸಮೀಪ ಕ್ಷಿಪಣಿ ಹೊಡೆದುರುಳಿಸಿದ ಸೇನೆ

Update: 2017-07-28 16:14 GMT

ರಿಯಾದ್, ಜು. 28: ಯಮನ್ ಬಂಡುಕೋರರು ಸಿಡಿಸಿದ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಗುರುವಾರ ತಡರಾತ್ರಿ ಸೌದಿ ಅರೇಬಿಯದ ಮಕ್ಕಾ ಸಮೀಪ ಹೊಡೆದುರುಳಿಸಲಾಗಿದೆ ಎಂದು ಯಮನ್‌ನಲ್ಲಿ ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿರುವ ಅರಬ್ ಸೇನಾ ಮೈತ್ರಿಕೂಟ ತಿಳಿಸಿದೆ.

ಮಕ್ಕಾ ನಗರದ ದಕ್ಷಿಣಕ್ಕೆ 69 ಕಿ.ಮೀ. ಅಂತರದಲ್ಲಿ ಕ್ಷಿಪಣಿಯನ್ನು ತಡೆಯಲಾಗಿದೆ ಎಂದು ಮೈತ್ರಿಕೂಟ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ‘‘ಇದು ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳ ಮಕ್ಕಾದಲ್ಲಿ ನಡೆಯುವ ವಾರ್ಷಿಕ ಹಜ್ ಕಾರ್ಯಕ್ರಮವನ್ನು ತಡೆಯುವ ಬಂಡುಕೋರರ ಹತಾಶ ಯತ್ನವಾಗಿದೆ’’ ಎಂದು ಹೇಳಿಕೆ ಬಣ್ಣಿಸಿದೆ.

ಆಗಸ್ಟ್ ತಿಂಗಳ ಕೊನೆಯಲ್ಲಿ ಹಜ್ ಆರಂಭವಾಗಲಿದೆ.

ಬಂಡುಕೋರರು ಮಕ್ಕಾದ ದಿಕ್ಕಿನಲ್ಲಿ ಕ್ಷಿಪಣಿಗಳನ್ನು ಹಾರಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಹಿಂದೆಯೂ ಹಲವು ಬಾರಿ ಕಿರು ವ್ಯಾಪ್ತಿಯ ರಾಕೆಟ್‌ಗಳನ್ನು ಹಾಗೂ ಕ್ಷಿಪಣಿಗಳನ್ನು ಬಂಡುಕೋರರು ಹಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News