×
Ad

ಹಜ್ ಋತುವಿನ ನೀರಿನ ಏರ್ಪಾಡು ಪರಿಶೀಲಿಸಿದ ಮಕ್ಕಾ ಗವರ್ನರ್

Update: 2017-07-31 19:52 IST

ಜಿದ್ದಾ, ಜು. 31: 2017 ಹಜ್ ಋತುವಿಗಾಗಿ ಮಾಡಿರುವ ಏರ್ಪಾಡುಗಳ ಬಗ್ಗೆ ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಪರಿಸರ, ನೀರು ಮತ್ತು ಕೃಷಿ ಸಚಿವಾಲಯದ ಜೊತೆ ಚರ್ಚೆ ನಡೆಸಿದರು.

ಪರಿಸರ, ನೀರು ಮತ್ತು ಕೃಷಿ ಸಚಿವ ಅಬ್ದುಲ್ ರಹಮಾನ್ ಅಲ್-ಫದ್ಲಿ ಅವರ ಜೊತೆ ಜಿದ್ದಾದಲ್ಲಿ ಸಭೆ ನಡೆಸಿದ ಬಳಿಕ, ರಾಜಕುಮಾರ ಖಾಲಿದ್ ವಲಯದ ಜಲ ಯೋಜನೆಗಳ ಪರಿಶೀಲನೆ ನಡೆಸಿದರು.

ಅದೇ ವೇಳೆ, ಮುಂಬರುವ ಹಜ್ ಋತುವಿಗಾಗಿ ಸಚಿವಾಲಯ ಮಾಡಿರುವ ಏರ್ಪಾಡುಗಳ ವಿವರಗಳನ್ನು ಪಡೆದುಕೊಂಡರು.

ಈ ಬಾರಿ, ಕಳೆದ ಬಾರಿಗೆ ಹೋಲಿಸಿದರೆ ನೀರಿನ ಪೂರೈಕೆಯಲ್ಲಿ 21 ಶೇಕಡ ವೃದ್ಧಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News