ಕತರ್ ಹಜ್ ಯಾತ್ರಿಗಳನ್ನು ನಿಷೇಧಿಸಿಲ್ಲ: ಸೌದಿ

Update: 2017-07-31 15:07 GMT

ರಿಯಾದ್, ಜು. 31: ಹಜ್ ಯಾತ್ರೆಗಾಗಿ ಸೌದಿ ಅರೇಬಿಯ ಪ್ರವೇಶಿಸುವುದರಿಂದ ಕತರ್‌ನ ಯಾತ್ರಿಗಳನ್ನು ನಿಷೇಧಿಸಲಾಗಿದೆ ಎಂಬ ವರದಿಗಳನ್ನು ಸೌದಿ ಅರೇಬಿಯದ ಪಾಸ್‌ಪೋರ್ಟ್ ಮಹಾ ನಿರ್ದೇಶನಾಲಯದ ಮುಖ್ಯಸ್ಥ ಮೇಜರ್ ಜನರಲ್ ಸುಲೈಮಾನ್ ಅಲ್-ಯಹ್ಯಾ ನಿರಾಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘‘ಕತರ್ ಸಹೋದರರು ತಮ್ಮ ಸಂಬಂಧಿಗಳನ್ನು ಭೇಟಿಯಾಗಲು ಈಗ ಸೌದಿ ಅರೇಬಿಯ ಪ್ರವೇಶಿಸುತ್ತಿದ್ದಾರೆ’’ ಎಂದು ಅಲ್-ಯಾಹ್ಯಾ ಹೇಳಿರುವುದಾಗಿ ಅಲ್-ಜಝೀರ ದೈನಿಕ ವರದಿ ಮಾಡಿದೆ.

ಕತರ್‌ನ ಯಾತ್ರಿಗಳಿಗೆ ಹಜ್ ಯಾತ್ರೆ ನಿರಾಕರಿಸಲಾಗಿದೆ ಎಂಬುದಾಗಿ ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್-ತಾನಿ ಅವರ ಮಾಧ್ಯಮ ಸಲಹೆಗಾರ ಅಬ್ದುಲ್ಲಾ ಅಲ್-ಅಝ್ಬೆಹ್ ಮೇ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News