ದಾರುನ್ನೂರ್ ದೇರಾ ದುಬೈ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2017-07-31 18:09 GMT

ದುಬೈ, ಜು. 31: ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದೇರಾ ದುಬೈ ಶಾಖೆಯ ಮಹಾ ಸಭೆಯು ಇತ್ತೀಚೆಗೆ ದೇರಾ ದುಬೈಯಲ್ಲಿರುವ ರೋಯಲ್ ಮಾರ್ಕ್ ಹೋಟೆಲ್ ಅಡಿಟೋರಿಯಮ್ ನಲ್ಲಿ ಸದ್ರಿ ಸಮಿತಿ ಅದ್ಯಕ್ಷ  ಉಸ್ತಾದ್ ಶರೀಫ್ ಅಶ್ರಫಿ  ಮಡಂತ್ಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಅತಿಥಿಗಳಾಗಿ ಅವಲೋಕನ ಸಮಿತಿ ಪ್ರಮುಖರಾದ  ಬದ್ರುದ್ದೀನ್ ಹೆಂತಾರ್,  ಹಮೀದ್ ಮನಿಲ, ಉಸ್ಮಾನ್ ಕೆಮ್ಮಿಂಜೆ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿ ಗೌರವಾದ್ಯಕ್ಷ ಅಬ್ದುಲ್ ಸಲಾಂ ಬಪ್ಪಳಿಗೆ ಸ್ವಾಗತಿಸಿ, ಶಾಖೆಯ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮವನ್ನು ಸದ್ರಿ ಸಮಿತಿ ಉಪಾಧ್ಯಕ್ಷ ಅಬ್ಬಾಸ್ ಕೇಕುಡೆ ಉದ್ಘಾಟಿಸಿ, ಮಾತನಾಡಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನಾಸಿರ್ ಬಪ್ಪಳಿಗೆ ವಾಚಿಸಿದರು. ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ಅನ್ಸಾಫ್ ಪಾತೂರು ವಿವರಿಸಿದರು.  ವಾರ್ಷಿಕ ಚಟುವಟಿಕೆಗಳ ಅವಲೋಕನವನ್ನು ಬದ್ರುದ್ದೀನ್ ಹೆಂತಾರ್ ಮಾಡಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷರಾಗಿ ಅಬ್ದುಲ್ ಸಲಾಂ ಬಪ್ಪಳಿಗೆ, ಅಧ್ಯ ಕ್ಷರಾಗಿ ಉಸ್ತಾದ್ ಶರೀಫ್ ಅಶ್ರಫಿ ಮಡಂತ್ಯಾರ್, ಉಪಾಧ್ಯಕ್ಷರಾಗಿ ಸುಲೈಮಾನ್ ಮುಸ್ಲಿಯಾರ್ ಕಲ್ಲೆಗ, ಅಬ್ಬಾಸ್ ಕೇಕುಡೆ,  ಅನ್ಸಾಫ್ ಪಾತೂರ್,  ಅಬ್ದುಲ್ ರಝಾಕ್ ಉಸ್ತಾದ್ ಪಾತೂರು, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಕಡಬ, ಕಾರ್ಯದರ್ಶಿಗಳಾಗಿ ಉಸ್ಮಾನ್ ಮರೀಲ್,  ನಾಸಿರ್ ಬಪ್ಪಳಿಗೆ,  ಅಝೀಝ್ ಸೋಂಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಪರ್ಲಡ್ಕ, ಕನ್ವೀನರ್ ಸಿದ್ದೀಕ್ ನಾಳ, ಸಮೀರ್ ಕರಾಯ,  ಸಮದ್ ಪೊಯ್ಯತ್ತಬೈಲ್, ಹಾರಿಸ್ ಕುಂತೂರ್,  ಜಾಬಿರ್ ಬಪ್ಪಳಿಗೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶ್ರಫ್ ಕಂಬ್ಲಬೆಟ್ಟು, ಅಬ್ದುಲ್ ಅಝೀಝ್ ಪಾತೂರ್, ಖಲಂದರ್ ಕಾರ್ಕಳ,  ಇಕ್ಬಾಲ್ ಮೂಡುಬಿದಿರೆ,  ಹಾಶಿಮ್ ಪರ್ಲಡ್ಕ, ಸಮೀರ್ ಪರ್ಲಡ್ಕ, ಬಾತಿಷ ಪರ್ಲಡ್ಕ,  ಶೌಕತ್ ಕಣ್ಣೂರ್,  ಸದಕತುಲ್ಲಾಹ್ ಕಣ್ಣೂರ್,  ಅಬೂಬಕ್ಕರ್ ಬಜಾಲ್,  ಅಬ್ದುಲ್ ರಹ್ಮಾನ್ ಪೆರಾಜೆ, ಜಮಾಲ್ ಬಜ್ಪೆ,  ಶರೀಫ್ ಗಂಜಿಮಠ  ಮೊದಲಾದವರನ್ನು ಆರಿಸಲಾಯಿತು.

ಅನ್ಸಾಫ್ ಪಾತೂರ್ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಪರ್ಲಡ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News