ದುಬೈಯಲ್ಲಿ 87 ಲಕ್ಷ ಮೌಲ್ಯದ ಮನೆ ಗೆದ್ದ ನೇರಳಕಟ್ಟೆಯ ಯುವಕ

Update: 2017-08-01 12:45 GMT

ದುಬೈ, ಆ.1: ಯುಎಇ ಎಕ್ಸ್ ಚೇಂಜ್ ಸಂಸ್ಥೆಯ ಸಮ್ಮರ್ ಪ್ರಮೋಶನ್-2017 ವಿನ್ ಎ ಹೋಮ್ ಇನ್ ದುಬೈ' ಸ್ಪರ್ಧೆಯಲ್ಲಿ ಬಂಪರ್ ಬಹುಮಾನವಾಗಿ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಉಬೈದುಲ್ಲಾ 5 ಲಕ್ಷ ದಿರ್ಹಮ್ (87,27,198 ರೂ.) ಮೌಲ್ಯದ ಮನೆಯನ್ನು ಜಯಿಸಿದ್ದಾರೆ.

"ನನ್ನ ಜೀವನದಲ್ಲಿ ನಾನು ಯಾವತ್ತಾದರೂ ಏನನ್ನೂ ಗೆಲ್ಲಲಿಲ್ಲ. ಈ ಪ್ರಮೋಶನ್ ನಲ್ಲಿ ವಿಜೇತನಾಗಿರುವುದು ಕನಸು ನನಸಾದಂತೆ'' ಎಂದು ಉಬೈದುಲ್ಲಾ ಹೇಳಿದ್ದಾರೆ.ಯುಎಇ ಎಕ್ಸ್ ಚೇಂಜ್ ಸಮೂಹದ ಸಿಇಒ ಪ್ರಮೊತ್ ಮಂಗತ್ ಬಹುಮಾನವನ್ನು ವಿತರಿಸಿದರು. ಈ ಪ್ರಮೋಶನ್ ಅನ್ವಯ ಒಟ್ಟು 26 ಮಂದಿ ಬಹುಮಾನ ಗಳಿಸಿದ್ದಾರೆ.

ಉಬೈದುಲ್ಲಾ ಅವರಿಗೆ 5 ಲಕ್ಷ ದಿರ್ಹಮ್ ಮೌಲ್ಯದ ಹೊಚ್ಚ ಹೊಸ ಮನೆಯೊಂದು ದುಬೈ ನಗರದಲ್ಲಿ ಬಹುಮಾನವಾಗಿ ದೊರೆತಿದೆ. ಇತರ 26 ಮಂದಿ ವಿಜೇತರಿಗೆ10,000 ದಿರ್ಹಮ್ ಬಹುಮಾನ ಸಿಕ್ಕಿದೆ. ವಿಜೇತರು ಈಜಿಪ್ಟ್, ಕೆನ್ಯ, ಫಿಲಿಪೈನ್ಸ್, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಪ್ರಜೆಗಳಾಗಿದ್ದಾರೆ.

"ದುಬೈ ನಗರದಲ್ಲಿ ಮನೆಯೊಂದನ್ನು ಹೊಂದುವುದು ಹಲವರ ಪಾಲಿನ ಕನಸಾಗಿದೆ. ಇದನ್ನು ಗಮನಿಸಿಯೇ ನಮ್ಮ ಈ ಪ್ರಮೋಶನ್ ಗೆ ಮನೆಯೊಂದನ್ನು ಬಂಪರ್ಬಹುಮಾನವಾಗಿ ಘೋಷಿಸಿದೆವು" ಎಂದು  ಪ್ರಾದೇಶಿಕ ಮಾರ್ಕೆಟಿಂಗ್ ಮ್ಯಾನೇಜರ್ ಕೌಶಲ್ ದೋಶಿ ಹೇಳಿದ್ದಾರೆ.

ಈ ಸಮ್ಮರ್ ಪ್ರಮೋಶನ್ ಮೇ 24ರಿಂದ ಜುಲೈ 7ರವರೆಗೆ ಒಟ್ಟು 45 ದಿನಗಳ ಕಾಲ ನಡೆದಿತ್ತು. ಕಳೆದ ವರ್ಷ 2,22,222 ಡಾಲರ್ ಮೊತ್ತದ ನಗದು ಬಹುಮಾನಗಳನ್ನುವಿಜೇತರಿಗೆ ನೀಡಲಾಗಿದ್ದರೆ,  2015ರಲ್ಲಿ ಗ್ರಾಹಕರಿಗೆ ಒಟ್ಟು 6 ಕೆಜಿ ಬಂಗಾರ ಬಹುಮಾನವಾಗಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News