ಆಯ್ದ ವಲಸಿಗರಿಗೆ ಪೌರತ್ವ ನೀಡಲು ಕತರ್ ಯೋಜನೆ

Update: 2017-08-03 16:51 GMT

ದುಬೈ, ಆ. 3: ಕೆಲವು ವಿದೇಶೀಯರಿಗೆ ಖಾಯಂ ವಾಸ್ತವ್ಯ ಹೊಂದುವ ಅವಕಾಶ ನೀಡಲು ಕತರ್ ಉದ್ದೇಶಿಸಿದೆ ಎಂದು ಆ ದೇಶದ ಸರಕಾರಿ ಸುದ್ದಿ ಸಂಸ್ಥೆ ಕ್ಯೂಎನ್‌ಎ ವರದಿ ಮಾಡಿದೆ.

ಬೇರೆ ದೇಶಗಳ ಪುರುಷರನ್ನು ಮದುವೆಯಾದ ಕತರ್ ಮಹಿಳೆಯರ ಮಕ್ಕಳಿಗೆ ಹಾಗೂ ಕತರ್‌ಗೆ ಶ್ರೇಷ್ಠ ಸೇವೆಗಳನ್ನು ನೀಡಿದ ವಿದೇಶೀಯರಿಗೆ ಖಾಯಂ ವಾಸ್ತವ್ಯ ನೀಡುವ ಕರಡು ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅದು ಬುಧವಾರ ಹೇಳಿದೆ.

ಕೊಲ್ಲಿ ಅರಬ್ ದೇಶಗಳಲ್ಲಿ ಭಾರೀ ಸಂಖ್ಯೆಯ ವಿದೇಶಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಅಪರೂಪದ ಸಂದರ್ಭ ಹೊರತುಪಡಿಸಿ ಈ ದೇಶಗಳು ಅವರಿಗೆ ಪೌರತ್ವ ನೀಡುವುದಿಲ್ಲ.

 ಕತರ್‌ನಲ್ಲಿ 27 ಲಕ್ಷ ಜನಸಂಖ್ಯೆಯಿದೆ. ಅವರ ಪೈಕಿ 3 ಲಕ್ಷ ಮಂದಿ ನಾಗರಿಕರು. ವಲಸಿಗರಿಗೆ ಪೌರತ್ವ ನೀಡಿದರೆ ಜನಸಂಖ್ಯಾ ಅನುಪಾತದಲ್ಲಿ ಏರುಪೇರಾಗಬಹುದು ಎಂಬ ಭೀತಿಯಲ್ಲಿ ಅದು ಹೊರಗಿನವರಿಗೆ ಪೌರತ್ವ ನೀಡುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News