ದುಬೈ: ದಾರುನ್ನೂರ್ ಮುರಕ್ಕಾಬಾತ್ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2017-08-05 17:13 GMT

ದುಬೈ,ಆ.5: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡಬಿದಿರೆ ಇದರ ಮುರಕ್ಕಾಬಾತ್ ಶಾಖೆಯ ಮೂರನೆ ಮಹಾ ಸಭೆಯು ಇತ್ತೀಚೆಗೆ ದೇರಾ ದುಬೈಯ ರೋಯಲ್ ಮಾರ್ಕ್ ಹೋಟೆಲ್ ಅಡಿಟೋರಿಯಮ್ ನಲ್ಲಿ ಶಾಹುಲ್ ಬಿ.ಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ದಾರುನ್ನೂರ್ ಯುಎಇ ಇದರ ಮುಖ್ಯ ಸಲಹೆಗಾರ ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಅವಲೋಕನ ಸಮಿತಿಯ ಪ್ರಮುಖರಾದ ಸಲೀಂ ಅಲ್ತಾಫ್ ಫರಂಗಿಪೇಟೆ,  ಬದ್ರುದ್ದೀನ್ ಹೆಂತಾರ್,  ಅಬ್ದುಲ್ ಸಲಾಂ ಬಪ್ಪಳಿಗೆ,  ಸಮೀರ್ ಇಬ್ರಾಹಿಂ ಕಲ್ಲರೆ ,  ಇಲ್ಯಾಸ್ ಕಡಬ,  ಅನ್ಸಾಫ್ ಪಾತೂರು,  ಹಮೀದ್ ಮನಿಲ ಮೊದಲಾದವರು ಉಪಸ್ಥಿತರಿದ್ದರು. 

ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ತಾಹಿರ್ ಹೆಂತಾರ್ ವಾಚಿಸಿದರು. ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಕಾರ್ಯದರ್ಶಿ ತಯ್ಯಿಬ್ ಹೆಂತಾರ್ ವಿವರಿಸಿದರು. ಬಳಿಕ  ಅವಲೋಕನ ಸಮಿತಿ ಪ್ರಮುಖರಾದ ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್ , ಸಮೀರ್ ಇಬ್ರಾಹಿಂ ಕಲ್ಲರೆ, ಅನ್ಸಾಫ್ ಪಾತೂರ್ ಮೊದಲಾದವರು ಸಾಧನೆಗಳನ್ನು ಅವಲೋಕಿಸಿ ಉಪದೇಶ ಮತ್ತು ಮಾರ್ಗದರ್ಶನವನ್ನು ನೀಡಿದರು.

ಅಧ್ಯಕ್ಷ ಶಾಹುಲ್ ಬಿ.ಸಿ.ರೋಡ್  ತನ್ನ ಕಾಲಾವಧಿಯಲ್ಲಿ ಸಹಕರಿಸಿದ ಎಲ್ಲಾ ಸಹೋದರರಿಗೆ ಕೃತಜ್ಞತೆ ಅರ್ಪಿಸಿ ದಾರುನ್ನೂರನ್ನು ಬಲಪಡಿಸಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿ, ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿ ಕೊಟ್ಟರು.

ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಅಬ್ದುಲ್ ಸಲಾಂ ಬಪ್ಪಳಿಗೆ ಅವರಿಗೆ ವಹಿಸಿಕೊಡಲಾಯಿತು. ದಾರುನ್ನೂರ್ ಮುರಕ್ಕಾಬಾತ್ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಗೌರವಾದ್ಯಕ್ಷರಾಗಿ ಶರೀಫ್ ಕೊಡ್ನೀರ್, ಅದ್ಯಕ್ಷರಾಗಿ ಮಹಮ್ಮದ್ ರಫೀಕ್ ಆತೂರು, ಉಪಾದ್ಯಕ್ಷರುಗಳಾಗಿ ಶಾಹುಲ್ ಬಿ.ಸಿ. ರೋಡ್, ನವಾಝ್ ಬಿ.ಸಿ ರೋಡ್, ಇಬ್ರಾಹಿಂ ಕುಂಡಾಜೆ ಆತೂರು, ಹಮೀದ್ ಸುಳ್ಯ, ಪ್ರಧಾನ ಕಾರ್ಯದರ್ಶಿ ತಾಹಿರ್ ಹೆಂತಾರ್, ಕಾರ್ಯದರ್ಶಿಗಳಾಗಿ ತಯ್ಯಿಬ್ ಹೆಂತಾರ್, ರಫೀಕ್ ಮುಕ್ವೆ, ಕೋಶಾಧಿಕಾರಿಯಾಗಿ ರಿಫಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಫಾರೂಕ್ ಬಿ.ಸಿ.ರೋಡ್, ಕನ್ವೀನರ್ ಗಳಾಗಿ ಆಸಿಫ್ ವಿಟ್ಲ, ಹಾರಿಸ್ ಕೊಯಿಲ, ಹಸೈನಾರ್ ಕೊಯಿಲ, ಅನ್ವರ್ ಕೆ.ಟಿ.ಸಿ ಆತೂರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಶೀದ್ ಮುನ್ನ ಬಂಗೇರ್ ಕಟ್ಟೆ, ಅಝ್ಮಲ್ ವಿಟ್ಲ,  ಅಬ್ದುಲ್ ರಶೀದ್, ಅಬ್ದುಲ್ ಖಾದರ್ ಕಾಸರಗೋಡ್, ಅಬ್ದುಲ್ ರಹ್ಮಾನ್ ಟಿ.,  ನಿಯಾಝ್ ಬಂಟ್ವಾಲ್, ರಿಯಾಝ್ ಪರ್ಲಡ್ಕ, ಕಬೀರ್ ನೀಲೇಶ್ವರ್, ಮಜೀದ್ ಬಿ.ಸಿ.ರೋಡ್, ಲತೀಫ್ ಮೂಡುಬಿದಿರೆ, ರಹ್ಮಾನ್ ಮೂಡುಬಿದಿರೆ, ರಫೀಕ್ ಕೋಣಾಜೆ, ಇಮ್ರಾನ್ ಬಿ.ಸಿ.ರೋಡ್ , ಪರ್ವೇಝ್ ಮುಲಾರ್ಪಟ್ನ, ಬದ್ರುದ್ದೀನ್ ಇಡ್ಯಾ ಸುರತ್ಕಲ್, ದಾವೂದ್ ಅಲಕೆ, ಮೊಯ್ದಿನ್ ತಿರೂರ್, ಆಶಿರ್ ವಿಟ್ಲ, ದಸ್ತಗೀರ್ ವಿಟ್ಲ, ಅಬೂಬಕರ್ ಪೂಂಜಾಲಕಟ್ಟೆ, ಮಹಮ್ಮದ್ ಷರೀಫ್ ವಿಟ್ಲ,  ಅಹ್ಮದ್ ಮನ್ಸೂರ್ ವಿಟ್ಲ,  ಆಶ್ರಫ್ ವಿಟ್ಲ, ಯೂಸುಫ್ ವಿಟ್ಲ, ಇರ್ಶಾದ್ ಕೊಯಿಲ, ಶಾಕಿರ್ ಬಂಗೇರ್ ಕಟ್ಟೆ, ಮುಸ್ತಾಕ್ ನೀರಾಜೆ ಆಯ್ಕೆಯಾದರು. 

ನೂತನ ಸಮಿತಿ ಅಧಿಕಾರ ವಹಿಸಿದ ಬಳಿಕ ನೂತನ ಅಧ್ಯಕ್ಷ ಮುಹಮ್ಮದ್ ರಫೀಕ್ ಆತೂರ್ ಮಾತನಾಡಿ, ಸಮಿತಿ ಸದಸ್ಯರ ಸಹಕಾರವನ್ನು ಕೋರಿದರು. ದಾರುನ್ನೂರ್ ವಿದ್ಯಾ ಕೇಂದ್ರದಲ್ಲಿ ಪ್ರತಿ ವರ್ಷ 40 ಮಕ್ಕಳ ಸೇರ್ಪಡೆಗೊಳ್ಳುತ್ತಿದ್ದು ಸಂಪೂರ್ಣ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದು ಅವರ ಜವಾಬ್ಧಾರಿ ಪ್ರತಿಯೋಬ್ಬರ ಮೇಲಿದೆ ಎಂದು ತಿಳಿಸಿದರು.

ರಿಫಾಯಿ ಸ್ವಾಗತಿಸಿ, ತಾಹಿರ್ ಹೆಂತಾರ್ ಕಾರ್ಯಕ್ರಮ ನಿರೂಪಿಸಿದರು.  ಷರೀಫ್ ಕೊಡ್ನೀರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News