ಉಚಿತ ವೈಫೈಗಳನ್ನು ಉಪಯೋಗಿಸುತ್ತೀರೇ?: ಹಾಗಾದರೆ ಎಚ್ಚರಿಕೆ ವಹಿಸಿ

Update: 2017-08-06 11:59 GMT

ದುಬೈ,ಆ.6: ಸಿಕ್ಕಲ್ಲೆಲ್ಲ ಉಚಿತ ವೈಫೈ ಉಪಯೋಗಿಸುವವರಿಗೆ ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂಗೀಕೃತ ಟೆಲಿಕಾಂ ಕಂಪೆನಿಗಳು,ಮಾಲ್‍ಗಳು, ಸಂಸ್ಥೆಗಳು ನೀಡುವ ಉಚಿತ ವೈಫೈಯಲ್ಲದೆ ಎಲ್ಲಾದರೂ ವೈಫೈ ಸಿಕ್ಕರೆ ಉಪಯೋಗಿಸುವವರು ಎಚ್ಚರ ವಹಿಸಬೇಕು. ಕೆಲವೇನಿಮಿಷಗಳಲ್ಲಿ ಆ ಸೌಲಭ್ಯವನ್ನು ಉಪಯೋಗಿಸುವ ವೇಳೆ ನಿಮ್ಮ ಫೋನ್‍ನ ವಿವರಗಳನ್ನು ಸೋರಿಕೆ ಮಾಡಲು ಕಾದು ನಿಂತ ತಂಡಗಳು ಸುತ್ತಲೂಇವೆ. ಉಚಿತ ವೈಫೈಯ ಲಾಭವೆತ್ತಿ ವ್ಯಕ್ತಿಯ  ವಿವರಗಳನ್ನು  ಸೈಬರ್ ಕ್ರಿಮಿನಲ್‍ಗಳು ಸೋರಿಕೆ ಮಾಡುತ್ತಾರೆ ಎಂದು ದುಬೈ ಪೊಲೀಸರುಮುನ್ನೆಚ್ಚರಿಕೆ ನೀಡಿದ್ದಾರೆ.
ಫ್ರೀ ಪಬ್ಲಿಕ್ ವೈಫೈ, ಮಾಲ್ ವೈಫೈ ಮುಂತಾದ ಸಂಶಯವೇ  ಆಗದ ರೀತಿಯಲ್ಲಿ ಕ್ರಿಮಿನಲ್‍ಗಳು ವೈಫೈ ಹಾಟ್‍ಸ್ಪಾಟ್‍ಗಳನ್ನು ಸೃಷ್ಟಿಸುತ್ತಿದ್ದಾರೆ.ಅದನ್ನು ನೋಡಿ ಫೋನ್ ಕನೆಕ್ಟ್ ಮಾಡಿದ ಕೂಡಲೇ ವಿವರಗಳು ಸೋರಿಕೆಯಾಗಲು  ಆರಂಭವಾಗುತ್ತದೆ. ಫೋನ್‍ನಲ್ಲಿರುವ ಚಿತ್ರಗಳು,ಪಾಸ್‍ವರ್ಡ್‍ಗಳು, ಬ್ಯಾಂಕ್ ವ್ಯವಹಾರಗಳು, ಯಾವಾಗಲೂ  ಭೇಟಿ ನೀಡುವ ಸೈಟ್‍ಗಳಿಂದ ಹಿಡಿದು ಅಮೂಲ್ಯ ವಿವರಗಳನ್ನು ಹ್ಯಾಕರ್‍ಗಳುಸೋರಿಕೆಮಾಡಿ ದುರುಪಯೋಗಿಸುತ್ತಾರೆ. ಇಂತಹ ಅಸುರಕ್ಷಿತ ವೈಫೈ ನೆಟ್‍ವರ್ಕ್‍ಗಳನ್ನು ಉಪಯೋಗಿಸುವ ಅಪಾಯದ ಕುರಿತು  ಜನರುಜಾಗೃತರಾಗಿಲ್ಲ ಎಂದು ಸೈಬರ್ ಅಪರಾಧಕೃತ್ಯ ತಡೆಯುವ ವಿಭಾಗದ ಉಪಮುಖ್ಯಸ್ಥ ಲೆಫ್ಟಿನೆಂಟ್ ಸಲೀಂ ಬಿನ್ ಸಲ್‍ಮೀನ್ ಹೇಳಿದರು.
ಮಹಿಳೆಯರ ಸಾಮಾಜಿಕ ಮಾಧ್ಯಮಗಳ  ವಿವರಗಳನ್ನು ಮತ್ತು ಫೋಟೊವನ್ನು ಸೋರಿಕೆ ಮಾಡಿ ಹ್ಯಾಕರ್‍ಗಳು ದುರುಪಯೋಗಿಸಿ ಹಣ ಕೀಳಲುಪ್ರಯತ್ನಿಸುತ್ತಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಉಚಿತ ವೈಫೈ ಉಪಯೋಗಿಸಿರುವುದು ಗೊತ್ತಾಯಿತು. ನಂತರದುಬೈ ಪೊಲೀಸರು ಹ್ಯಾಕ್ ಮಾಡಿದ ದೇಶವನ್ನು ಸಂಪರ್ಕಿಸಿ ಮಹಿಳೆಯ ಖಾತೆಯನ್ನು ಸರಿಪಡಿಸಿದ್ದಾರೆ.
ಹಳೆಯ ಸ್ಮಾರ್ಟ್‍ಫೋನ್‍ಗಳನ್ನು ಬೇರೆಯವರಿಗೆ ಕೊಡುವುದು ಮತ್ತುಮಾರುವುದು ಕೂಡಾ ಅಪಾಯಕಾರಿಯಾಗಿದೆ ಎಂದು ಲೆಫ್ಟಿನೆಂಟ್ ಸಲ್ಮೀನ್ಹೇಳಿದ್ದಾರೆ. ಫೋಟೊ,ವೀಡಿಯೊಗಳನ್ನು ಡಿಲಿಟ್ ಮಾಡಿದರೂ ಹ್ಯಾಕರ್‍ಗಳು   ಅದನ್ನು ಮತ್ತೆ ಚಾಲೂ ಮಾಡುತ್ತಾರೆ. ಹಳೆಯ ಫೋನ್‍ಗಳನ್ನು ತಮ್ಮಕೈಯಲ್ಲೇ ಇರಿಸಿಕೊಳ್ಳುವುದು ಉತ್ತಮವಾಗಿದೆ. ಸೈಬರ್ ಅಪರಾಧಗಳು ಗಮನಕ್ಕೆ ಬಂದರೆ
mail@dubaipolice.gov.ae ಎಂಬ ವಿಳಾಸಕ್ಕೆ ತಿಳಿಸಬೇಕೆಂದು ದುಬೈಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News