ದುಬೈ: ಮತ್ತೊಂದು ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

Update: 2017-08-06 12:26 GMT

ದುಬೈ, ಆ.6: ಕೆಲದಿನಗಳ ಹಿಂದಷ್ಟೇ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ನಂತರ ರವಿವಾರವೂ ದುಬೈ ಮರೀನಾದ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಇಲ್ಲಿನ ಟೈಗರ್ ಟವರ್ ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಶೀಘ್ರ ಕಾರ್ಯಾಚರಣೆಯ ಮೂಲಕ ಹತೋಟಿಗೆ ತರಲಾಯಿತು. ಟವರ್ ನ 53ನೆ ಮಹಡಿಯ ಬಾಲ್ಕನಿಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ತಗಲಿದ್ದು, ನಂತರ ವ್ಯಾಪಿಸಿತ್ತು ಎಂದು ಕ್ಯಾ.ಅಮಿರ್ ಅಬ್ದುಲ್ ವಹಾಬ್ ಅಲ್ ಖಹ್ತಾನಿ ಹೇಳಿದ್ದಾರೆ.

ಸೇದಿ ಎಸೆದ ಸಿಗರೇಟಿನ ಕಿಡಿ ಅಥವಾ ಭಾರೀ ಉಷ್ಣಾಂಶದಿಂದಾಗಿ ಅಗ್ನಿ ಕಾಣಿಸಿಕೊಂಡಿರಬಹುದು ಎಂದವರು ಅಭಿಪ್ರಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News