ಕತರ್ ಗೆ ತೆರಳಲು ವೀಸಾ ಚಿಂತೆಯೇ..?

Update: 2017-08-09 16:01 GMT

ದೋಹಾ, ಆ.9: ವಾಯುಯಾನ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕತರ್, ಭಾರತ ಸೇರಿದಂತೆ 80 ದೇಶಗಳಿಗೆ ವೀಸಾರಹಿತ ಪ್ರವೇಶವನ್ನು ಘೋಷಿಸಿದೆ.

ಯೂರೋಪ್ ನ ದೇಶಗಳು, ಭಾರತ, ಲೆಬನಾನ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ಬ್ರಿಟನ್, ಕೆನಡ ಸೇರಿದಂತೆ 80 ದೇಶಗಳು ಈ ಯೋಜನೆಯಲ್ಲಿ ಒಳಗೊಳ್ಳಲಿದೆ.

 “ವೀಸಾರಹಿತ ಯೋಜನೆಯು ಈ ವ್ಯಾಪ್ತಿಯಲ್ಲೇ ಕತರನ್ನು ಅತೀ ಮುಕ್ತ ರಾಷ್ಟ್ರವಾಗಿ ಮಾರ್ಪಡಿಸಲಿದೆ. ನಮ್ಮ ದೇಶದ ಪ್ರಸಿದ್ಧ ವೈದ್ಯಕೀಯ, ಸಾಂಸ್ಕೃತಿಕ ಪರಂಪರೆ ಹಾಗೂ ನೈಸರ್ಗಿಕ ಸಂಪತ್ತುಗಳನ್ನು ಸಂದರ್ಶಕರಿಗೆ ಪರಿಚಯಿಸುವ ಬಗ್ಗೆ ನಾವು ಸಂತೋಷಗೊಂಡಿದ್ದೇವೆ" ಎಂದು ಮುಖ್ಯ ಪ್ರವಾಸೋದ್ಯಮ ಅಭಿವೃದ್ಧಿ ಅಧಿಕಾರಿ ಹಸನ್ ಅಲ್ ಇಬ್ರಾಹೀಂ ತಿಳಿಸಿದ್ದಾರೆ.

ಜೂನ್ 5ರಂದು ಸೌದಿ ಅರೇಬಿಯಾ ಈಜಿಪ್ಟ್, ಬಹರೈನ್ ಹಾಗೂ ಯುಎಇ ಜೊತೆಗೂಡಿ ಕತರ್ ಮೇಲೆ ನಿರ್ಬಂಧ ಹೇರಿತ್ತು. ಆರು ತಿಂಗಳ ಕನಿಷ್ಠ ಕಾಲಾವಧಿಯ ಪಾಸ್ ಪೋರ್ಟನ್ನು ರಿಟರ್ನ್ ಟಿಕೆಟ್ ಜೊತೆಗೆ ಪ್ರವೇಶದ ಸಂದರ್ಭ ನೀಡಿದರೆ ಉಚಿತವಾಗಿ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಕತರ್ ಸರಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News