ಆ.18: ದುಬೈ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರ್ವ ಧರ್ಮೀಯರ "ಸ್ನೇಹ ಮಿಲನ"

Update: 2017-08-13 10:46 GMT

ದುಬೈ, ಆ.13: ಭಾರತದ 71ನ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್  (ಕೆಸಿಎಫ್) ದುಬೈ ವತಿಯಿಂದ "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋಷ ವಾಕ್ಯ ದೊಂದಿಗೆ ಆ.18ರಂದು ಸರ್ವ ಧರ್ಮೀಯರ ಸ್ನೇಹ ಮಿಲನ ಸಮಾವೇಶ ನಡೆಯಲಿದೆ.

ಅಂದು ಸಂಜೆ 7ಕ್ಕೆ ದುಬೈ ದೇರಾ ಸಿಟಿ ಸೆಂಟರ್ ಸಮೀಪದ ಸಿಟಿ ಸೂಟ್ ಹೋಟೆಲ್ ಸಭಾಂಗಣದಲ್ಲಿ ಜರಗಲಿದೆ ಎಂದು ದುಬೈ ಕೆಸಿಎಫ್ ಸ್ವಾತಂತ್ರ್ಯ ದಿನಾಚರಣೆಯ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್  ತಿಳಿಸಿದ್ದಾರೆ.

ಸಾಮಾಜಿಕ ಮುಂದಾಳು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುರ್ರಝಾಕ್ ಡಿ.ಇ.ಡಬ್ಲ್ಯು.ಎ. ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಮಹಾ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ಸಮಾರಂಭವನ್ನು ಉದ್ಘಾಟಿಸುವರು. ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡುವರು.

ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿಸೋಜ, ಕೆಸಿಎಫ್ ಯುಎಇ ರಾಷ್ಟ್ರಾಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಕರ್ನಾಟಕ  ಎನ್.ಆರ್.ಐ. ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.

ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಮಾರ್ಕ್ ಡೆನ್ನಿಸ್ ಡಿಸೋಜ, ದುಬೈ ಕರ್ನಾಟಕ ಸಂಘದ ಉಪಾಧ್ಯಕ್ಷ ಕೆ.ಆರ್.ತಂತ್ರಿ, ಮಂಗಳೂರು ಕೊಂಕಣಿ ಸಮಿತಿಯ ಜೇಮ್ಸ್ ಮೆಂಡೋನ್ಸ ,ಕೆಸಿಎಫ್ ಯುಎಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಕೊಡಗು, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸುಗಂದ್ರಾಜ್ ಬೇಕಲ್, ಮೊಗವೀರಾಸ್ ದುಬೈಯ ಬಾಲಕೃಷ್ಣ ಸಾಲ್ಯಾನ್, ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಇಲಾಖೆಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕಾವೇರಿ ಟ್ರೇಡಿಂಗ್ ವಾಣಿಜ್ಯ ಉದ್ಯಮಿ ಅರುಣ್ ಕಾರಿಯಪ್ಪ, ದುಬೈ ಗೌಡ ಕನ್ನಡಿಗರು ಸಂಘದ ಮಲ್ಲಿಕಾರ್ಜುನ ಗೌಡ, ದುಬೈ ಸುನ್ನೀ ಸಂಘ ಸಂಸ್ಥೆಗಳ ಮುಂದಾಳು ಅಶ್ರಫ್ ಹಾಜಿ ಅಡ್ಯಾರು, ದುಬೈ ತುಳುಕೂಟದ ಸತೀಷ್ ಶೆಟ್ಟಿ ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸುವರು.

ಅಮೆರಿಕಾದ ಅಲಬಾಮದಲ್ಲಿ, ನಾಸಾ ಯುಎಸ್ ಸ್ಪೇಸ್ ಅಕಾಡೆಮಿ ವಿಂಗ್ಸ್ ಅಧೀನದಲ್ಲಿ ಆಯೋಜಿಸಲ್ಪಟ್ಟ ಯುಎಸ್ SPACE AND ROCKETRY PROGRAMME ತರಬೇತು ಶಿಬಿರದಲ್ಲಿ ವಿಶೇಷ ಅಭ್ಯರ್ಥಿಯಾಗಿ ಪಾಲ್ಗೊಳ್ಳಲು ಯುಎಇಯಿಂದ ಆರಿಸಲ್ಪಟ್ಟು ಪ್ರಥಮ ಪದಕ ಪಡೆದ ಮಾಸ್ಟರ್ ತಸ್ದೀಕ್ ಅಬ್ದುಲ್ ರಝಾಕ್ ರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

ಕಾರ್ಯಾಧ್ಯಕ್ಷ ಮೆಹ್ ಬೂಬ್  ರಹ್ಮಾನ್ ಸಖಾಫಿ ಕಿನ್ಯ, ಉಪಾಧ್ಯಕ್ಷ ಅಬ್ದುಲ್ ಶುಕೂರ್ ಮನಿಲ, ಅಬ್ದುಲ್ ರಹೀಮ್ ಕೋಡಿ - ಕಾರ್ಯದರ್ಶಿ, ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ,  ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಾಜೂರ್, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು, ಶಾಹುಲ್ ಹಮೀದ್ ಸಖಾಫಿ ಕೊಡಗು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News