ಸೌದಿ: 90 ಲಕ್ಷ ಮಾದಕ ದ್ರವ್ಯ ಮಾತ್ರೆ ವಶ; 24 ಬಂಧನ

Update: 2017-08-14 16:59 GMT

ರಿಯಾದ್, ಆ. 14: ಯುಎಇಯ ಸಹಕಾರದ ಫಲವಾಗಿ, ಒಟ್ಟು 90 ಲಕ್ಷ ಆ್ಯಂಫಿಟಮೈನ್ ಮಾದಕ ದ್ರವ್ಯ ಮಾತ್ರೆಗಳನ್ನು ಸೌದಿ ಅರೇಬಿಯದೊಳಕ್ಕೆ ಕಳ್ಳಸಾಗಣೆ ಮಾಡುವ ಎರಡು ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ.

ಮೊದಲ ಪ್ರಕರಣದಲ್ಲಿ, ಯುಎಇ ಅಧಿಕಾರಿಗಳು ಇಬ್ಬರು ಸಿರಿಯನ್ನರನ್ನು ಬಂಧಿಸಿ 60 ಲಕ್ಷ ಆ್ಯಂಫಿಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡನೆ ಪ್ರಕರಣದಲ್ಲಿ, ಸೌದಿ ಮತ್ತು ಯುಎಇ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 30 ಲಕ್ಷ ಮಾತ್ರೆಗಳನ್ನು ಸೌದಿಯೊಳಗೆ ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿದರು.

ಮೂರನೆ ಪ್ರಕರಣದಲ್ಲಿ, 335 ಕೆಜಿ ಮಾದಕ ಪದಾರ್ಥ ಕಳ್ಳಸಾಗಣೆಯನ್ನು ವಿಫಲಗೊಳಿಸಿದರು.

ಈ ಮೂರು ಪ್ರಕರಣಗಳಲ್ಲಿ ಒಟ್ಟು 24 ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News