ಜಿದ್ದಾದಲ್ಲಿ ಬೆಂಕಿ: 6 ಕಟ್ಟಡಗಳು ಭಸ್ಮ

Update: 2017-08-16 14:34 GMT

ಜಿದ್ದಾ (ಸೌದಿ ಅರೇಬಿಯ), ಆ. 16: ಸೌದಿ ಅರೇಬಿಯದ ಜಿದ್ದಾ ನಗರದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಆರು ಕಟ್ಟಡಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ ಮೂರು ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ ಹಾಗೂ 60 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

‘‘ಮಂಗಳವಾರ ಸಂಜೆ ಅಪಘಾತ ನಡೆದ ವೇಳೆ 60 ಮಂದಿಯನ್ನು ತೆರವುಗೊಳಿಸುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಆರು ಕಟ್ಟಡಗಳ ಮುಂಭಾಗದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಈ ಎಲ್ಲ ಆರು ಕಟ್ಟಡಗಳು ಐತಿಹಾಸಿಕ ಸ್ಥಳದಲ್ಲಿದ್ದು, ಎಲ್ಲ ಕಟ್ಟಡಗಳಲ್ಲಿಯೂ ಜನರಿದ್ದರು’’ ಎಂದು ಮಕ್ಕಾ ವಲಯದ ನಾಗರಿಕ ರಕ್ಷಣಾ ವಕ್ತಾರ ಕರ್ನಲ್ ಸಯೀದ್ ಸರ್ಹಾನ್ ಹೇಳಿದರು.

ಜಿದ್ದಾದ ನಾಗರಿಕ ರಕ್ಷಣಾ ಮಹಾ ನಿರ್ದೇಶನಾಲಯದ ಡಝನ್‌ಗೂ ಅಧಿಕ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದವು. ರಾತ್ರಿ 10 ಗಂಟೆಯ ವೇಳೆಗೆ, 80 ಶೇಕಡದಷ್ಟು ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ತಂಡಗಳು ಯಶಸ್ವಿಯಾದವು.

ಇಟ್ಟಿಗೆಯ ಗೋಡೆಗಳು ಮತ್ತು ಮರದ ಮೇಲ್ಛಾವಣಿ ಹೊಂದಿದ ನಾಲ್ಕಂತಸ್ತಿನ ಕಟ್ಟಡದಲ್ಲಿ ಬೆಂಕಿ ಆರಂಭಗೊಂಡಿತು. ಅದೇ ಸ್ಥಳದಲ್ಲಿದ್ದ ಇತರ ಎರಡು ಕಟ್ಟಡಗಳಿಗೆ ಎದುರು ಭಾಗದಲ್ಲಿದ್ದ ಮರದ ತೊಲೆಗಳ ಮೂಲಕ ಬೆಂಕಿ ಹರಡಿತು. ಈ ಎರಡು ಕಟ್ಟಡಗಳು ಬಳಿಕ ಕುಸಿದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News