ಧೋನಿಯ ಹೆಸರಿನಲ್ಲಿ ದುಬೈಯಲ್ಲಿ ಕ್ರಿಕೆಟ್ ಅಕಾಡಮಿ

Update: 2017-08-17 10:43 GMT

ದುಬೈ,ಆ. 17: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿಯವರ ಹೆಸರಿನಲ್ಲಿ ಕ್ರಿಕೆಟ್ ಅಕಾಡಮಿ ದುಬೈಯಲ್ಲಿ ಆರಂಭವಾಗುತ್ತಿದೆ.  ಧೋನಿಯ ಸಹಕಾರದಲ್ಲಿ ಪೆಸಿಫಿಕ್ ಸ್ಪೋಟ್ಸ್ ಕ್ಲಬ್ ಅಕಾಡಮಿಗೆ ನೇತೃತ್ವವವನ್ನುವಹಿಸಿಕೊಂಡಿದೆ. ದುಬೈಯಲ್ಲಿ ಕ್ರಿಕೆಟ್‍ಗೆ ಉತ್ತಮ ಬೆಳವಣಿಗೆ ಸಾಧ್ಯವಾಗಲಿದೆ ಎನ್ನುವ ವಿಶ್ವಾಸದಲ್ಲಿ ಹೊಸ ಸಂಸ್ಥೆಗೆ ಚಾಲನೆ ನೀಡಲಾಗಿದೆ.  ಗಲ್ಫ್‍ರಾಷ್ಟ್ರದಲ್ಲಿ ಧೋನಿಯ ಮೊತ್ತಮೊದಲ ಸಂಸ್ಥೆ ಇದಾಗಿದ್ದು, ಆಗಸ್ಟ್ 15ರಂದು ಆರಂಭವಾಗಿದೆ.

ಪ್ರಮುಖ  ಸಂಘಟಕರಾದ ಪರ್ವೇಝ್ ಖಾನ್ ನೇತೃತ್ವದ ರಿಯಲ್ ಎಸ್ಟೇಟ್ ಕಂಪೆನಿ ಪೆಸಿಫಿಕ್ ವೇಂಜರ್ಸ್ ಎನ್ನು ಸಂಸ್ಥೆಯ ಭಾಗವಾಗಿ ಫೆಸಿಫಿಕ್ ಸ್ಪೋರ್ಟ್ಸ್ ಕ್ಲಬ್‍ನ್ನು ಆರಂಭಿಸಲಾಗಿದೆ. ಉನ್ನತ ಕ್ರೀಡಾ ಸೌಕರ್ಯ ಹಾಗೂ ಉನ್ನತ ತರಬೇತಿ ನೀಡುವುದು ಪೆಸಿಫಿಕ್‍ನ ಉದ್ದೇಶವಾಗಿದೆ ಎಂದು ಫರ್ವೇಝ್ ಖಾನ್ ತಿಳಿಸಿದ್ದಾರೆ. ಧೋನಿಯ ಉಪಸ್ಥಿತಿ, ಸಲಹೆಗಳು ಅಕಾಡಮಿಯ ವಿಶೇಷತೆಯಾಗಲಿದ್ದು, ಯುಎಇಯ ಹೊರಗೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಎಂ.ಎಸ್. ಧೋನಿ ಕ್ರಿಕೆಟ್ ಅಕಾಡಮಿ ಆರಂಭಿಸುವ ಹಕ್ಕನ್ನುಪೆಸಿಫಿಕ್ ಕ್ಲಬ್ ಗಳಿಸಿಕೊಂಡಿದೆ. ಅಲ್‍ಖೈಲ್‍ನ ಸ್ಪ್ರಿಂಗ್ ಡೆಯಿಲ್ಸ್ ಸ್ಕೂಲ್‍ನ್ನು ಕೇಂದ್ರೀಕರಿಸಿ ಅಕಾಡಮಿಯ ಚಟುವಟಿಕೆಗಳು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News