ಕತರ್‌ನ ಮೊದಲ ಹಜ್ ತಂಡ ಗಡಿ ದಾಟಿ ಸೌದಿಗೆ

Update: 2017-08-18 16:31 GMT

ಜಿದ್ದಾ (ಸೌದಿ ಅರೇಬಿಯ), ಆ. 18: ಕತರ್‌ನ 100 ಹಜ್ ಯಾತ್ರಿಗಳನ್ನು ಒಳಗೊಂಡ ಮೊದಲ ತಂಡ ಸಲ್ವಾ ಗಡಿದಾಟು ಮೂಲಕ ಸೌದಿ ಅರೇಬಿಯ ಪ್ರವೇಶಿಸಿದೆ ಹಾಗೂ ಸೌದಿ ಅರೇಬಿಯದ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.

ಹಜ್ ಪರ್ಮಿಟ್‌ಗಳಿಲ್ಲದೆ ಯಾತ್ರಿಗಳನ್ನು ಒಳಗೆ ಬಿಡಲಾಯಿತು ಹಾಗೂ ಅವರನ್ನು ದೊರೆ ಸಲ್ಮಾನ್‌ರ ಅತಿಥಿಗಳನ್ನಾಗಿ ಪರಿಗಣಿಸಲಾಗುವುದು. ಅವರ ಎಲ್ಲ ವೆಚ್ಚಗಳನ್ನು ದೊರೆಯೇ ಭರಿಸಲಿದ್ದಾರೆ.

ಅವರಿಗೆ ದಮ್ಮಾಮ್ ಮತ್ತು ಅಲ್-ಅಹ್ಸ ವಿಮಾನ ನಿಲ್ದಾಣಗಳಿಂದ ಪವಿತ್ರ ನಗರಗಳಿಗೆ ಸೌದಿ ಅರೇಬಿಯದ ವಿಮಾನಯಾನ ಕಂಪೆನಿಗಳಲ್ಲಿ ಉಚಿತ ಪ್ರಯಾಣದ ಏರ್ಪಾಡು ಮಾಡುವಂತೆ ದೊರೆ ಸಲ್ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News