ಹಜ್ ಭದ್ರತೆಗೆ 17,000 ಭದ್ರತಾ ಸಿಬ್ಬಂದಿ ನಿಯೋಜನೆ
Update: 2017-08-19 22:46 IST
ಮಕ್ಕಾ, ಆ. 19: ಹಜ್ ವೇಳೆ ಯಾತ್ರಿಕರಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸಲು 17,000ಕ್ಕೂ ಅಧಿಕ ಅತ್ಯುನ್ನತ ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಅವರಿಗೆ 3,000 ಸುಧಾರಿತ ವಾಹನಗಳನ್ನು ಒದಗಿಸಲಾಗಿದೆ ಎಂದು ನಾಗರಿಕ ರಕ್ಷಣೆ ಮಹಾ ನಿರ್ದೇಶನಾಲಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಎಲ್ಲ ಪವಿತ್ರ ಸ್ಥಳಗಳಿಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಹಾಗೂ ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಅವರು ಸಮರ್ಥರಾಗಿದ್ದಾರೆ ಎಂದು ಹಜ್‌ಗಾಗಿನ ನಾಗರಿಕ ರಕ್ಷಣಾ ನಿರ್ದೇಶಕ ಮೇಜರ್ ಜನರಲ್ ಹಮದ್ ಅಲ್-ಮುಬದ್ದೀಲ್ ಹೇಳಿದರು.