ಇಂಡಿಪೆಂಡೆನ್ಸ್ ಕಪ್ 2017: ಕ್ರಿಕೆಟ್ ಪಂದ್ಯಕೂಟದ ಸಮಾರೋಪ

Update: 2017-08-19 17:26 GMT

ಜಿಝಾನ್, ಆ.19: ಸೌದಿ ಅರೇಬಿಯಾ, ಬೈಶ್ ನಲ್ಲಿ  'ಬಿನ್ ಫಹದ್ ಸ್ಪೋರ್ಟ್ಸ್ ಅಕಾಡಮಿ ಬೈಶ್' ವತಿಯಿಂದ ನಡೆದ  'ಇಂಡಿಪೆಂಡೆನ್ಸ್ ಕಪ್  2017'  ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಬೈಶ್ ನ ರಾಮಿ ಕ್ರೀಡಾಂಗಣದಲ್ಲಿ  ನಡೆಯಿತು 

ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಅಕಾ ತಂಡವು ಬಿನ್ ಫಹದ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಬ್ಯಾಟಿಂಗ್  ಹಾಗೂ ಬೌಲಿಂಗ್ ವಿಭಾಗದಲ್ಲಿ ಮಿಂಚಿ ಆಲ್ರೌಂಡ್ ಪ್ರದರ್ಶನ ನೀಡಿದ  ಬಿನ್ ಫಹದ್ ತಂಡದ ಅರ್ಷಾದ್ ಪಡುಬಿದ್ರೆ ಹಾಗೂ ಸರಣಿ ಶ್ರೇಷ್ಟರಾಗಿ ಶ್ರೀಜಿತ್ ಪ್ರಶಸ್ತಿ  ತಮ್ಮದಾಗಿಸಿಕೊಂಡರು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ  ಸ್ವಾತಂತ್ರೋತ್ಸವವನ್ನು ಬೃಹತ್ತಾದ ತ್ರಿವರ್ಣ ಧ್ವಜದ ಕೇಕು ಕತ್ತರಿಸುವ ಮೂಲಕ ಮತ್ತು ಭಾರತ ಮತ್ತು ಸೌದಿ ಅರೇಬಿಯಾದ ಧ್ವಜವನ್ನು ಆರೋಹಣ ಮಾಡುವ ಮೂಲಕ ಆಚರಿಸಲಾಯಿತು. ಇಂಡಿಯನ್ ಸೋಶಿಯಲ್ ಫೋರಮ್ ನ ಸಲೀಂ ಗುರುವಾಯನಕೆರೆ ಸ್ವಾತಂತ್ರದ ಸಂದೇಶವನ್ನು ನೀಡಿದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ನ ಸಲೀಂ ಗುರುವಾಯನಕೆರೆ, ಆರೀಸ್ ಉಳ್ಳಾಲ, ರಾಝಿಕ್ ಕುಂದಾಪುರ, ಶಫಾನ್ ಗಂಗೊಳ್ಳಿ  ಉಪಸ್ಥಿತರಿದ್ದರು.

ಪಂದ್ಯಕೂಟದ ತೀರ್ಪುಗಾರರಾಗಿ ಮೆಹಬೂಬ್ ಮಡಿಕೇರಿ, ಸಿದ್ದಿಕ್ ಬುಲೆಟ್, ನೌಫಾಲ್ ಕಂಚಿನಡ್ಕ ಸಹಕರಿಸಿದರು. ಕ್ರೀಡಾಕೂಟವನ್ನು ಸಾಬಿಹ್ ದೇರಳಕಟ್ಟೆ, ಝಹೀರ್ ಉಡುಪಿ, ಅವ್ಫಾ  ಕೃಷ್ಣಾಪುರ, ನವಾಝ್ ಶಾಕೊ, ಅಜ್ಮಾನ್ ಸಾಗರ, ಮುಕ್ತಾರ್ ಪಡುಬಿದ್ರೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಿದರು.

ನವಾಝ್ ಕಂಚಿನಡ್ಕ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. 

Writer - ಶಾಹುಲ್ ಹಮೀದ್ ಕಾಶಿಪಟ್ಣ

contributor

Editor - ಶಾಹುಲ್ ಹಮೀದ್ ಕಾಶಿಪಟ್ಣ

contributor

Similar News