ದುಬೈ: ದಾರುನ್ನೂರ್ ಅಲ್ ನಕೀಲ್ ಶಾಖೆಯ ಪುನರ್ರಚನೆ

Update: 2017-08-21 12:35 GMT

ದುಬೈ, ಆ. 21: ದಾರುನ್ನೂರ್ ಅಲ್ ನಕೀಲ್ ಶಾಖೆಯ ಪುನರ್ರಚನೆ ಕಾರ್ಯವು ದೇರಾ ದುಬೈಯಲ್ಲಿರುವ ಮಲಬಾರ್ ರೆಸ್ಟೋರೆಂಟ್ ನಲ್ಲಿ ನಡೆಯಿತು.

ಅವಲೋಕನ ಸಮಿತಿಯ ಪ್ರಮುಖರಾದ ಸಲೀಂ ಅಲ್ತಾಫ್ ಫರಂಗಿಪೇಟೆ,  ಬದ್ರುದ್ದೀನ್ ಹೆಂತಾರ್,  ಅಬ್ದುಲ್ ಸಲಾಂ ಬಪ್ಪಳಿಗೆ,  ಮಹಮ್ಮದ್ ರಫೀಕ್ ಅತೂರು, ಉಸ್ಮಾನ್ ಕೆಮ್ಮಿಂಜೆ, ಇಲ್ಯಾಸ್ ಕಡಬ ಮೊದಲಾದವರು ಉಪಸ್ಥಿತರಿದ್ದರು.

ಅಬೂಬಕ್ಕರ್ ಹಾಜಿ ದುಆ ಮಾಡಿದರು. ದಾರುನ್ನೂರಿನ ಪ್ರಧಾನ ಕಾರ್ಯದರ್ಶಿ  ಸಿದ್ದೀಕ್ ಪಾಣೆಮಂಗಳೂರು ಸ್ವಾಗತಿಸಿದರು.

 ಬದ್ರುದ್ದೀನ್ ಹೆಂತಾರ್  ಅಲ್ ನಕೀಲ್ ಶಾಖೆಯನ್ನು ಪುನರ್ರಚಿಸುವ ಉದ್ದೇಶವನ್ನು ಪ್ರಾಸ್ತಾಪಿಸಿದರು. ಸದ್ರಿ ಸಮಿತಿಯ ಅಧ್ಯಕ್ಷ ಹಮೀದ್ ಮನಿಲ ಉದ್ಯೋಗದಿಂದ ನಿವೃತಿ ಹೊಂದಿ ಊರಿಗೆ ಹೋಗಿದ್ದು, ಆ ಸ್ಥಾನಕ್ಕೆ  ಅಧ್ಯಕ್ಷರನ್ನು ನೇಮಿಸುವುದು ಮತ್ತು ಸಮಿತಿಯಲ್ಲಿ ನಡೆಸಬಹುದಾದ  ಬದಲಾವಣೆ ಯನ್ನು ವಿವರಿಸಿದರು.

ಸಲೀಂ ಅಲ್ತಾಫ್ ಫರಂಗಿಪೇಟೆ ಪ್ರಸಕ್ತ ನಾಡಿನ  ಸನ್ನಿವೇಶ ಮತ್ತು ಮುಂದಿನ ತಲೆಮಾರಿಗೆ ನಾವು ನೀಡುವ ಮಹಾ ಸಂಪತ್ತು ಧಾರ್ಮಿಕ ಚಿಂತೆಯುಳ್ಳ ವಿದ್ಯಾಭಾಸ,  ಅದಕ್ಕಾಗಿ ನಾವು ಮಾಡಬಹುದಾದ ತ್ಯಾಗದ ಬಗ್ಗೆ ವಿವರಿಸಿದರು.

2017-18 ರ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು

ಗೌರವಾದ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಮಲಪ್ಪುರಮ್, ಅದ್ಯಕ್ಷರಾಗಿ ಅಬ್ದುಲ್ ರಝಾಕ್ ಕೆಮ್ಮಿಂಜೆ, ಉಪಾದ್ಯಕ್ಷರಾಗಿ ಸಿದ್ದೀಕ್ ಹಾಜಿ , ಮುಸ್ತಫಾ ಉಜಿರೆ, ಮಹಮ್ಮದ್ ಮುಸ್ತಫಾ ಪಾಣೆಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪಾಣೆಮಂಗಳೂರು, ಕಾರ್ಯದರ್ಶಿಗಳಾಗಿ ಜಾಬಿರ್ ಬೆಟ್ಟಂಪಾಡಿ, ಮುಸ್ತಫಾ ಕಕ್ಕಿಂಜೆ, ಕೋಶಾಧಿಕಾರಿಯಾಗಿ ಅನ್ವರ್ ಮಾನಲ, ಸಂಘಟನಾ ಕಾರ್ಯದರ್ಶಿಯಾಗಿ ನೂರ್ ಮಹಮ್ಮದ್ ನೀರ್ಕಜೆ, ಕನ್ವೀನರ್ ಗಳಾಗಿ ಜೆ.ಬಿ ಅಬ್ದುಲ್ಲಾ ಬೆರಿಂಜ,  ಝಕರಿಯಾ ಮುಲಾರ್, ಹಿದಾಯತ್ ಪಾಣೆ ಮಂಗಳೂರು, ಶರೀಫ್ ಬಪ್ಪಳಿಗೆ, ಮಹಮ್ಮದ್ ಅಝ್ಹರುದ್ದೀನ್ ಕೆಮ್ಮಿಂಜೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶಫಿಕ್ ಕೈಕಂಬ,  ಮಹಮ್ಮದ್ ನಯೀಮ್ ಚೆನ್ನೈ ,  ಇಸ್ ಹಾಕ್ ಸಾಲೆತ್ತೂರು,  ಜಲೀಲ್ ವಿಟ್ಲ,  ಸಮೀರ್ ವಡಗರ,   ಅಬ್ದುಲ್ಲಾ ಪುತ್ತೂರ್,  ಶಾಫಿ ಮಲಪ್ಪುರಮ್ ,  ರಫೀಕ್ ಸಂಪ್ಯ ,  ಶಾಕಿರ್ ಕಂಬ್ಲಬೆಟ್ಟು ,  ಮನ್ಸೂರ್ ಬೆಲ್ಮ ,  ರಝಾಕ್ ಸವಣೂರ್,  ಅಲ್ತಾಫ್ ಕೌಡಿಚಾರ್ , ಆಶ್ರಫ್ ಮುಲಾರ್ , ನಿಝಾರ್ ಕೋಝಿ ಕ್ಕೋಡ್ , ಸಿದ್ದೀಕ್ ಕಾರಾಜೆ, ಮಹಮ್ಮದ್ ಮುಸ್ತಫಾ ವಾಮನಪದವು ಮೊದಲಾದವರನ್ನು ಆರಿಸಲಾಯಿತು.

ನೂತನ ಅಧ್ಯಕ್ಷ ಅಬ್ದುಲ್ ರಝಾಕ್ ಕೆಮ್ಮಿಂಜೆ ತನ್ನ ಹೊಸ ಅನುಭವವನ್ನು ಹಂಚಿಕೊಂಡು ದಾರುನ್ನೂರಿನ ಶ್ರೇಯಸ್ಸಿಗಾಗಿ ದುಡಿಯುವುದಾಗಿಯೂ ಇತರರನ್ನು ಪ್ರೇರೇಪಿಸುವುದಾಗಿಯೂ ತಿಳಿಸಿದರು.

ಅದೇ ರೀತಿ ಮಹಮ್ಮದ್ ಮುಸ್ತಫಾ ಪಾಣೆ ಮಂಗಳೂರು ಮತ್ತು ಅಝ್ಹರುದ್ದೀನ್ ಕೆಮ್ಮಿಂಜೆ ಸಾಂದರ್ಬಿಕವಾಗಿ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜಾಬಿರ್ ಬೆಟ್ಟಂಪಾಡಿ ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವ ದಾರುನ್ನೂರ್ ಎಲ್ಲರ ಮನದಲ್ಲೂ ಹೊಸ ಸಂಚಲನ ಮೂಡಿಸಿದ್ದು ಇದರ ಆವಶ್ಯಕತೆ ಎಲ್ಲರಿಗೂ ಅನಿವಾರ್ಯವಾಗಿದೆ ಎಂದು ಹೇಳುತ್ತಾ ಕಾರ್ಯಕ್ರಮವನ್ನು  ತನ್ನ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News