×
Ad

ನಕಲಿ ಸರ್ಟಿಫಿಕೆಟ್: ದಮ್ಮಾಮ್ ನಲ್ಲಿ ಏಳು ಭಾರತದ ನರ್ಸ್‍ಗಳ ಬಂಧನ

Update: 2017-08-25 18:08 IST

ದಮ್ಮಾಂ, ಆ. 25: ನಕಲಿ ಸರ್ಟಿಫಿಕೆಟ್ ಹಾಜರುಪಡಿಸಿದ ಏಳು ಮಂದಿ ಕೇರಳದ ನರ್ಸ್‍ಗಳನ್ನು ದಮ್ಮಾಮ್‍ನಲ್ಲಿ ಬಂಧಿಸಲಾಗಿದೆ. ಕ್ರಿಮಿನಲ್ ಆರೋಪ ಹೊರಿಸಿ ಇವರನ್ನುಜೈಲಿಗಟ್ಟಲಾಗಿದೆ ಎಂದು ಸೌದಿ ಅರೇಬಿಯ ಆರೋಗ್ಯ ಸಚಿವಾಲಯ ತಿಳಿಸಿದೆ. ದಮ್ಮಾಮ್‍ನ ನಾಲ್ಕು ಪ್ರಮುಖ ಆಸ್ಪತ್ರೆಗಳಲ್ಲಿ ಇವರು ಕೆಲಸ ಮಾಡುತ್ತಿದ್ದರು. ಸಚಿವಾಲಯ ನಡೆಸಿದ ಸೂಕ್ಷ್ಮ ಪರಿಶೀಲನೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಕೆಲವರು ಟ್ರಾವೆಲ್ ಏಜೆಂಟ್‍ಗಳು ನೀಡಿದ್ದ ನಕಲಿ ಸರ್ಟಿಫಿಕೆಟ್‍ಗಳನ್ನು ಹೊಂದಿದ್ದರು. ಬಂಧಿಸಲಾದ ನರ್ಸ್‍ಗಳ ಹೆಸರು ಮತ್ತು ವಿವರಗಳನ್ನು ಆಸ್ಪತ್ರೆಯ ಅಧಿಕಾರಿಗಳು ಬಹಿರಂಗಪಡಿಸಿಲ್ಲ.

 2005ರ ನಂತರ ಸೌದಿಅರೇಬಿಯಕ್ಕೆ ಬಂದವರ ವಿದ್ಯಾಭ್ಯಾಸ ಸರ್ಟಿಫಿಕೆಟ್‍ಗಳನ್ನು, ಅನುಭವ ಸರ್ಟಿಫಿಕೆಟ್‍ಗಳನ್ನುಆರೋಗ್ಯ ಸಚಿವಾಲಯ ಕಳೆದ ವರ್ಷ ಸಂಗ್ರಹಿಸಿ ಪರಿಶೀಲನೆ ನಡೆಸಿತ್ತು. ಸೌದಿ ಅರೇಬಿಯದ ಆರೋಗ್ಯ ಕ್ಷೇತ್ರದಲ್ಲಿ ಕೆಲಸಕ್ಕೆ ಬರುವವರಿಗೆ ಊರಿನಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವ ಇರಬೇಕೆಂದು ನಿಯಮವಿದೆ. ಇದನ್ನು  ಉಲ್ಲಂಘಿಸಿ ಹಲವರು ನಕಲಿ ಸರ್ಟಿಫಿಕೆಟ್‍ಗಳನ್ನು ಹಾಜರು ಪಡಿಸಿದ್ದರು. ಆರೋಗ್ಯ ಸಚಿವಾಲಯದ ಪರಿಶೀಲನೆಯಲ್ಲಿ ಹಲವಾರು ಮಂದಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಹಲವರು ಕುಟುಂಬ ಸಹಿತ ಸೌದಿಯಲ್ಲಿ ವಾಸಿಸುವವರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News