ಕೆಸಿಎಫ್ ಮಕ್ಕಾ ವತಿಯಿಂದ ಕನಾ೯ಟಕದ ಹಜ್ಜಾಜಿಗಳಿಗೆ ತರಗತಿ
ಸೌದಿ ಅರೇಬಿಯಾ, ಆ. 25: ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೇಂಟಿಯರ್ ಕೋರ್ ಸೌದಿ ಅರೇಬಿಯಾ ವತಿಯಿಂದ ಹಜ್ಜಾಜಿ ಗಳಿಗೆ ಹಜ್ಜ್ ತರಗತಿ ಪ್ರತಿ ನಿತ್ಯ ಮಕ್ಕಾದಲ್ಲಿ ನಡೆಯುತ್ತಿದೆ.
ಪವಿತ್ರ ಹಜ್ಜ್ ಕಮ೯ ನಿವ೯ಹಿಸಲು ವಿಶ್ವದ ನಾನಾ ಭಾಗಗಳಿಂದ ವಯಸ್ಕರು, ಮಹಿಳೆಯರು ಪವಿತ್ರ ಮಕ್ಕಾದೆಡೆಗೆ ಆಗಮಿಸುತ್ತಿದ್ದಾರೆ. ಭಾರತದಿಂದಲೂ ಈ ಬಾರಿ ಲಕ್ಷಾಂತರ ಹಾಜಿಗಳು ಆಗಮಿಸಿದ್ದು, ಹೆಚ್.ವಿ.ಸಿ. ಕಾರ್ಯಕರ್ತರು ಕನಾ೯ಟಕದ ಹಜ್ಜಾಜಿಗಳಿರುವ ಕಟ್ಟಡಗಳಿಗೆ ತೆರಳಿ ಹಾಜಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ಹಜ್ಜ್ ತರಗತಿ ನೀಡುತ್ತಿದ್ದಾರೆ.
ದಾರುಲ್ ಇರ್ಶಾದ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫಿ ಪರಪ್ಪು ಅವರ ನೇತೃತ್ವದಲ್ಲಿ ಹಜ್ಜ್ ತರಗತಿ ನೀಡಲಾಗುತ್ತಿದ್ದು, ಪ್ರತಿನಿತ್ಯವೂ ಹಾಜಿಗಳು ಹಜ್ಜ್ ಕರ್ಮದ ಮಾಹಿತಿಗಳನ್ನು ಕಲಿತು, ಹಜ್ಜ್ ಕರ್ಮ ನಿರ್ವಹಿಸಲು ಸಜ್ಜಾಗಿದ್ದಾರೆ. ಹಜ್ಜ್ ವಾಲೇಂಟಿಯರ್ ಕೋರ್
ಕಪ್ತಾನ ಮೂಸಾ ಹಾಜಿ ಕಿನ್ಯ ಮತ್ತಿತ್ತರ ಹೆಚ್.ವಿ.ಸಿ ಕಾರ್ಯಕರ್ತರು ಉಪಸ್ಥಿತರಿದ್ದರು.