×
Ad

ಅಲ್ ಕೋಬಾರ್: ಕೆಸಿಎಫ್ ನಿಂದ ಬೀಳ್ಕೊಡುವ ಸಮಾರಂಭ

Update: 2017-08-26 21:30 IST

ಅಲ್ ಕೋಬಾರ್, ಆ. 26: ಪವಿತ್ರ ಹಜ್ಜ್ ನಿರ್ವಹಿಸಲು ಮತ್ತು ಜಗತ್ತಿನ ವಿವಿಧ ದೇಶಗಳಿಂದ ಹಜ್ಜ್ ನಿರ್ವಹಿಸಲು ಬಂದ ಅತಿಥಿಗಳಿಗೆ  ಸೇವನೆ ನಿರ್ವ ಹಿಸಲು ಹೊರಡುತ್ತಿರುವ ಸೆಕ್ಟರ್ ಕಾರ್ಯಕರ್ತರಿಗೆ ಕೆಸಿಎಫ್ ಅಲ್ ಕೋಬಾರ್ ಸೆಕ್ಟರ್ ವತಿಯಿಂದ ಬೀಳ್ಕೊಡುವ ಸಮಾರಂಭವು ಅಲ್ ಕೋಬಾರ್ ಸೆಕ್ಟರ್ ಹಾಲ್ ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ  ಅಬ್ದುಲ್ ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಜಲೀಲ್ ಕೆ.ಸಿ.ರೋಡ್ ಸ್ವಾಗತಿಸಿದರು. ದಮಾಮ್ ಝೋನ್ ಸಂಘಟನಾ ಚೇರ್ಮಾನ್ ಪಿಸಿ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಮುಹಮ್ಮದ್ ಸಅದಿ ಆದೂರು ಮುಖ್ಯ ಪ್ರಭಾಷಣ ನಡೆಸಿದರು. ಕೆಸಿಎಫ್ ಐಎನ್ ಸಿ ಕೋರ್ಡಿನೇಟರ್ ಹಾಜಿ ಎನ್ ಎಸ್ ಅಬ್ದಲ್ಲಾ, ಝೋನ್ ಕೋಶಾಧಿಕಾರಿ ಮುಹಮ್ಮದ್ ಮಲೆಬೆಟ್ಟು ಮಾತನಾಡಿದರು.

ಹಜ್ಜ್ ನಿರ್ವಹಿಸಲು ಹೊರಡುತ್ತಿರುವ ಕಾರ್ಯಕರ್ತರು ಮತ್ತು ಸೆಕ್ಟರ್ ಅಸ್ಸುಫ್ಫ ಟ್ಯೂಟರ್ ಉಸ್ತಾದ್ ಮುಹಮ್ಮದ್ ಸಅದಿ ಆದೂರು ಅವರಿಗೆ ಸಾಲು ಹೊದಿಸಿ ಬೀಳ್ಕೊಡಲಾಯಿತು. ಸೆಕ್ಟರ್ ಅಧೀನದ ರಾಖ ಯೂನಿಟ್, ಶಮಾಲಿಯಾ ಯೂನಿಟ್  ಹಾಗೂ ಬಯೋನಿಯ ಯೂನಿಟ್ ಕಾರ್ಯಕರ್ತರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News