ಅಬುದಾಭಿ: ಕನ್ನಡಿಗರಿಂದ ಸ್ವಾತಂತ್ರ್ಯೋತ್ಸವ

Update: 2017-08-26 16:11 GMT

ಅಬುದಾಭಿ, ಆ. 26: ಭಾರತ  ನಮ್ಮ ಜನ್ಮ ಬೀಡು, ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಾದ ನಾವು ಜೀವನ ಸಾಗಿಸುತ್ತಿದ್ದರೂ ತಮ್ಮ ದೇಶ ಪ್ರೇಮವನ್ನು ಇಲ್ಲಿಯೂ ಸ್ವಾತಂತ್ರ್ಯ ಆಚರಣೆ ಮೂಲಕ ವ್ಯಕ್ತಪಡಿಸುತ್ತಿರುವ ಕೆಸಿಎಫ್  ಅಭಿನಂದನಾರ್ಹವಾಗಿದೆ ಎಂದು ರಾಜ್ಯ ಸರಕಾರದ ಹಾಜ್ ಸಮಿತಿ ಸದಸ್ಯರೂ,   ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿಯೂ ಅದ  ಸಿದ್ದಿಕ್ ಮೊಂಟುಗೊಳಿ ಹೇಳಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್ ) ಅಬುದಾಭಿ ಝೋನ್ ಸಮಿತಿಯ ಆಶ್ರಯದಲ್ಲಿ  ನಡೆದ ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ  ಬೃಹತ್ ಆಝಾದಿ ಸಂಗಮದಲ್ಲಿ ಅತಿಥಿಗಳಾಗಿ  ಭಾಗವಹಿಸಿ ಮುಖ್ಯ ಭಾಷಣ ಮಾಡಿದರು. 1947 ರಲ್ಲಿ ಸ್ವತಂತ್ರ್ಯವಾದ ಭಾರತವು ತನ್ನ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ  ಸ್ವಾತಂತ್ರ್ಯಕ್ಕಾಗಿ ಹೋರಾಡಿದ  ಮೌಲಾನಾ ಮುಹಮ್ಮದಲಿ,  ಶೌಕತ್ ಅಲಿ ಹಾಗು ತನ್ನ ಈ ಇಬ್ಬರು ಮಕ್ಕಳನ್ನೂ ಸ್ವಾತಂತ್ರ್ಯಹೋರಾಟಕ್ಕಾಗಿ ಪ್ರೂತ್ಸಾಹಿಸಿ ಮಕ್ಕಳನ್ನು ದೇಶಕ್ಕೆ ಸಮರ್ಪಿಸಿದ ಅವರ ತಾಯಿ ಆಬಿದಾ ಬೇಗಂ ಅವರ ತ್ಯಾಗವನ್ನು ನೆನಪಿಸುತ್ತಾ ಸ್ವಾತಂತ್ರ್ಯಕ್ಕಾಗಿ  ಜಾತಿ ಮತ ಧರ್ಮ ನೋಡದೆ ಅಂದಿನ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮ ಗಾಂಧೀಜಿ ನೆಹರು ಮತ್ತು ಸಂಗ್ರಾಮದಲ್ಲಿ ಜೊತೆ ಸೇರಿದ ಮುಸ್ಲಿಂ, ಹಿಂದು, ಕ್ರೈಸ್ತ ರನ್ನೊಳಗೊಂಡ ಸರ್ವ ಧರ್ಮಾನುಯಾಯಿ ಹೋರಾಟಗಾರರೂ ಇಂದಿಲ್ಲಿ ಸ್ಮರಣೀಯರು. ಅವರು ನಮ್ಮ ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ಅರಿತು ಸರ್ವ ಭಾರತೀಯನೂ  ದೇಶದ ಅಖಂಡತೆ ಕಾಪಾಡಲು ಒಗ್ಗಟ್ಟಾಗಿ  ಐಕ್ಯತೆಯಲ್ಲಿ ಜೀವಿಸಬೇಕಾದುದು ಅನಿವಾರ್ಯ ಎಂದು ಅವರು ಹೇಳಿದರು.

ಮೌಲಾನ ಮುಹಮ್ಮದಲಿಯವರ ತಾಯಿ ತನ್ನ ಸ್ವತ ಕೈಯಲ್ಲಿ ತಯಾರಿಸಿದ ಉಡುಗೆಯೊಂದನ್ನು ಮಹಾತ್ಮಗಾಂಧೀಜಿಯವರಿಗೆ ಗೌರವಾರ್ಪಕವಾಗಿ ಉಡುಗೊರೆ ನೀಡಿದ್ದುದನ್ನು ಅವರು ನೆನಪಿಸಿದರು.

ಸಮಾರಂಭವು ಅಬುದಾಭಿಯ ಅರಬ್ ಉಡುಪಿ ಆಡಿಟೋರಿಯಂ ನಲ್ಲಿ ನಡೆಯಿತು. ಐಸಿಎಫ್ ಕಾರ್ಯದರ್ಶಿ ಹಮೀದ್ ಪರಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಸೈನಾರ್ ಅಮಾನಿ  ಸಮಾರಂಭದ  ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ, ಅಬುದಾಭಿ ಕನ್ನಡ ಸಂಘದ ಕೋಶಾಧಿಕಾರಿ  ಯೋಗೀಶ್ ಪ್ರಭು, ಐಎಸ್ ಸಿ ನ  ಅಬ್ದುಲ್ ಸಲಾಂ ಹಮೀದ್ ಸಅದಿ , ಝೈನುದ್ದೀನ್ ಹಾಜಿ, ದಾವೂದ್ ಮಾಸ್ಟರ್ ಸುಳ್ಯ  ಮೊದಲಾದವರು ಮಾತನಾಡಿದರು.

ಸಮಾರಂಭದಲ್ಲಿ  ಹಲವಾರು ಉಲಮಾ ಉಮಾರಾ ನೇತಾರರು, ಧಾರ್ಮಿಕ, ಶೈಕ್ಷಣಕ ಸಾಮಾಜಿಕ ಮತ್ತು ರಾಜಕೀಯ ಮುಂದಾಳುಗಳು ,ಸಂಪನ್ಮೂಲ ವ್ಯಕ್ತಿಗಳು ಹಾಗೂ ಕೆಸಿಎಫ್ ರಾಷ್ಟ್ರೀಯ- ಅಂತಾರಾಷ್ಟ್ರೀಯ ನಾಯಕರು ಭಾಗವಹಿಸಿದರು.

ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಝೋನ್ ಕಾರ್ಯದರ್ಶಿ ಹಕೀಮ್ ತುರ್ಕಳಿಕೆ, ಇಬ್ರಾಹಿಂ ಬ್ರೈಟ್ ಮಾರ್ಬಲ್  ಮುಸ್ಸಫ್ಫಾ, ಕೆ ಎಚ್  ಮುಹಮ್ಮದ್ ಕುಞಿ  ಸಖಾಫಿ ಸ್ಮರಣಿಕೆ ನೀಡಿ ಗೌರವಿಸಿದರು 
ಐಸಿಎಫ್ ನ ಅಸೈಯದ್ ಪೂಕೋಯ ಮುಸ್ತಫಾ ಮಿಸ್ಬಾಹಿ ಪ್ರಾರ್ಥನೆಯೊಂದಿಗೆ ಆರಂಭಿಸಿದ  ಸಮಾರಂಭದಲ್ಲಿ ಹಾಫಿಝ್ ಸಈದ್ ಹನೀಫಿ  ಕಿರಾಅತ್ ಬಳಿಕ ಜಾಬಿರ್ ಕಾಟಿಪ್ಪಳ್ಳ ರಾಷ್ಟ್ರ ಗೀತೆ ಹಾಡಿದರು. ಕಬೀರ್ ಬಾಯಂಬಾಡಿ ಸ್ವಾಗತಿಸಿ, ಸಿದ್ದಿಕ್ ಅಳಿಕೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ  ಸಿದ್ದಿಕ್ ಮೊಂಟುಗೊಳಿ ಪ್ರತಿಜ್ಞಾ ವಿಧಿ ಭೋದಿಸಿದರು. ನಾಸಿರ್ ಗಾಳಿಮುಖ ಕಾರ್ಯಕ್ರಮದ ನಿರೂಪಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News