ಕುವೈಟ್ ಚೆಸ್ ಚಾಂಪಿಯನ್ ಶಿಪ್: ಭಾರತಕ್ಕೆ ಪ್ರಶಸ್ತಿ

Update: 2017-08-27 11:59 GMT

ಕುವೈಟ್‍ ಸಿಟಿ, ಆ.27: ಹದಿನೈದನೆ ಕುವೈಟ್ ರ್ಯಾಪಿಡ್ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಹದಿನಾರು ವರ್ಷಕ್ಕಿಂತ ಕೆಳಗಿನ ವಯೋಮಾನದವರ ವಿಭಾಗದಲ್ಲಿ ಭಾರತದ ಸಾಮ್ನೊಲ್ ಪ್ರಶಸ್ತಿ ಗಳಿಸಿದ್ದಾರೆ.

ಅಲ್‍ಕುವೈಟ್ ಸ್ಪೋಟ್ರ್ಸ್‌‌‌‌ ಕ್ಲಬ್‍ನಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಈಜಿಪ್ಟ್‍ನ ಖಾಲಿದ್ ಅಬ್ದುಲ್ ರಾಸಿಕ್ ಅಲ್ ಮಸ್ರಿ ಮುಖ್ಯ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ದೇಶಗಳಿಂದ 38 ಆಟಗಾರರು ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದರು. ಗಲ್ಫ್ ದೇಶಗಳ ಜನರಲ್ಲಿ ಚೆಸ್‍ನಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶದಿಂದ ಚೆಸ್‍ಚಾಂಪಿಯನ್ ಶಿಪ್ ಸ್ಪರ್ಧೆ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News