ದಾರುನ್ನೂರ್ ಅಬುಧಾಬಿ ವಲಯದ ವಾರ್ಷಿಕ ಮಹಾ ಸಭೆ ಮತ್ತು ನೂತನ ಸಮಿತಿ ರಚನೆ

Update: 2017-08-28 17:12 GMT

ಅಬುಧಾಬಿ,ಆ.28 : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಬುಧಾಬಿ ವಲಯ ಸಮಿತಿಯ ಎರಡನೇ ವಾರ್ಷಿಕ ಮಹಾಸಭೆಯು  ಇತ್ತೀಚೆಗೆ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಹಾಲ್ ನಲ್ಲಿ ರವೂಫ್ ಹಾಜಿ ಕೈಕಂಬ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ಉಸ್ತಾದ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಬಾಯಾರ್ , ದಾರುನ್ನೂರ್ ಯುಎಇ ಅದ್ಯಕ್ಷರಾದ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ , ಜನಾಬ್ ಮಹಮ್ಮದ್ ಅಲಿ ಉಚ್ಚಿಲ್ ಅದ್ಯಕ್ಷರು ಬಿ ಡಬ್ಲ್ಯು ಯಫ್ , ಜನಾಬ್ ಶಾಫಿ ಪೆರುವಾಯಿ ಯಸ್ ಕೆ ಯಸ್ ಯಸ್ ಯಫ್ ಅಬುಧಾಬಿ ಸ್ಟೇಟ್ ಪ್ರಧಾನ ಕಾರ್ಯದರ್ಶಿ ,ಜನಾಬ್ ರಫೀಕ್ ಕೃಷ್ಣಾಪುರ ಬಿ ಡಬ್ಲ್ಯು ಯಫ್ ಉಪಾದ್ಯಕ್ಷರು  ಮೊದಲಾದವರು ಆಗಮಿಸಿದ್ದರು .

ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ ದಾರುನ್ನೂರ್ ಯುಎಇ ಕಾರ್ಯದರ್ಶಿ ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆಯವರಿಂದ  ದಾರುನ್ನೂರ್ ಇದರ ಸಮಗ್ರ ಮಾಹಿತಿ ನೀಡುವ ಡೋಕ್ಯುಮೆಂಟರಿಯನ್ನು ಪ್ರದರ್ಶಿಸಲ್ಪಟ್ಟಿತು. ಈ ಸಂದರ್ಭ ದಾರುನ್ನೂರ್ ಯುಎಇ ಕೋಶಾಧಿಕಾರಿ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ಮತ್ತು ಉಪಾದ್ಯಕ್ಷ ಜನಾಬ್ ಇಲ್ಯಾಸ್ ಕಡಬ ಉಪಸ್ಥಿತರಿದ್ದರು .

ಉಸ್ತಾದ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಬಾಯಾರ್ ರವರ ದುಆದ ಬಳಿಕ ಸ್ವಾಗತ ಭಾಷಣವು ದಾರುನ್ನೂರ್ ಅಬುಧಾಬಿ ವಲಯ ಗೌರವಾದ್ಯಕ್ಷರಾದ  ಜನಾಬ್ ಹನೀಫ್ ಹರಿಯಮೂಲೆಯವರಿಂದ ನೆರವೇರಿತು. ಈ ಸಂದರ್ಭ ದಾರುನ್ನೂರ್ ತನ್ನ ವರ್ಚಸ್ಸನ್ನು ಉತ್ತಮವಾಗಿ ಕಾಯ್ದುಕೊಂಡಿದ್ದು ಇದನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ದಾರುನ್ನೂರ್ ಯುಎಇ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು “ಮನುಷ್ಯ ತನ್ನ ಇಹದಲ್ಲಿ ಸಂಪಾದಿಸಿದ ಸ್ವತ್ತಿನಲ್ಲಿ ತನ್ನೊಂದಿಗೆ ಕೊಂಡೊಯ್ಯುವ ಪ್ರಮುಖ ವಸ್ತುವಾಗಿದೆ ಅವನು ಮಾಡಿದ ಉತ್ತಮ ಕರ್ಮ . ಅದನ್ನು ಶೇಖರಿಸುವಲ್ಲಿ ಎಲ್ಲರೂ ತಲ್ಲೀನರಾಗಬೇಕೇ ಹೊರತು ಇನ್ನಿತರ ಮೋಹಕ ವಸ್ತುಗಳನ್ನಲ್ಲ” ಎಂದು ವಿವರಿಸಿ ದಾರುನ್ನೂರಿನ ಶ್ರೇಯಸ್ಸಿನಲ್ಲಿ ಪ್ರತಿಯೊಬ್ಬನೂ ಪಾತ್ರದಾರರಾಗಬೇಕೆಂದು ವಿನಂತಿಸಿದರು. 

ಮಹಮ್ಮದ್ ಅಲಿ ಉಚ್ಚಿಲ್ ರವರು ದಾರುನ್ನೂರಿನ ಗುರಿ ಮತ್ತು ನೇತೃತ್ವವನ್ನು ಶ್ಲಾಘಿಸಿ ಅತ್ಯಂತ ಶ್ರೇಷ್ಠ ಗುಣ ಮಟ್ಟದ ಡೋಕ್ಯುಮೆಂಟರಿಯನ್ನು ತಯಾರಿಸಿ ಸಂಪೂರ್ಣ ದಾರುನ್ನುರಿನ ಯೋಜನೆಯನ್ನು ಮನದಟ್ಟು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಅಭಿನಂದನೆ ಅರ್ಪಿಸಿದರು. 

ವಾರ್ಷಿಕ ವರದಿಯನ್ನು ಮತ್ತು ಕಾರ್ಯ ಚಟುವಟಿಕೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಮಜೀದ್ ಹರಿಯಮೂಲೆಯವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ  ಬಶೀರ್ ಹರಿಯಮೂಲೆಯವರು ನೀಡಿದರು.

ನಿರ್ಗಮನ ಅದ್ಯಕ್ಷರ ಭಾಷಣ ಕಾರ್ಯಕ್ರಮದಲ್ಲಿ  ರವೂಫ್ ಹಾಜಿ ಕೈಕಂಬ ರವರು ಮಾತನಾಡಿ “ದಾರುನ್ನೂರ್ ಎಂಬ ವಿದ್ಯಾ ಸಂಸ್ಥೆ ನಮ್ಮ ಭವಿಷ್ಯವನ್ನು ದೃಢಗೊಳಿಸಿ ನಮ್ಮ ಸಮುದಾಯಕ್ಕೆ ನಾವು ಮಾಡುವ ಸೇವೆಯನ್ನು ಎತ್ತಿ ತೋರಿಸಲು ಅಲ್ಲಾಹು ತೋರಿಸಿದ ಮಾಧ್ಯಮವಾಗಿದ್ದು ಎಲ್ಲರೂ ಅದರ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ” ಎಂದರು. ನೇತಾರ ಉತ್ತಮನಾಗಿದ್ದಲ್ಲಿ ಸಂಸ್ಥೆಯು ಉತ್ತಮವಾಗಲಿರುವುದು . ನೇತಾರ ಹಿಂಜರಿದಲ್ಲಿ ಎಲ್ಲವೂ ತಲೆಕೆಳಗಾಗಲಿರುವುದು ಎಂದು ಹಲವು ಉದಾಹರಣೆ ಸಹಿತ ವಿವರಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿರುವುದಾಗಿ ಘೋಷಿಸಿದರು.

ದಾರುನ್ನೂರ್ ಅಬುಧಾಬಿ ವಲಯ ಸಮಿತಿಗೆ  ಅಬುಧಾಬಿ  ಸ್ಟೇಟ್ ಸಮಿತಿಯ ಪದವಿಯನ್ನು  ನೀಡಿರುವುದಾಗಿ ಘೋಷಿಸಿದರು. ಆ ಪ್ರಕಾರ ಅಬುಧಾಬಿ ಸ್ಟೇಟ್ ಸಮಿತಿಗೆ ಈ ಕೆಳಗಿನ ಪ್ರಮುಖರನ್ನು 2017-18 ರ ಸಾಲಿಗೆ ಆರಿಸಲಾಯಿತು.

ಗೌರವ ಸಲಹೆಗಾರರು: ಅಬ್ದುಲ್ಲಾ ಮದುಮೂಲೆ, ಮಹಮ್ಮದ್ ಅಲಿ ಉಚ್ಚಿಲ್,ರಫೀಕ್ ಕೃಷ್ಣಾಪುರ , ಫಕ್ರುದ್ದೀನ್ ಕುಪ್ಪೆಪದವು 
ಗೌರವಾದ್ಯಕ್ಷರು : ಮಹಮ್ಮದ್ ಹನೀಫ್ ಹರಿಯಮೂಲೆ , ಅದ್ಯಕ್ಷರು : ರವೂಫ್ ಹಾಜಿ ಕೈಕಂಬ 
ಉಪಾದ್ಯಕ್ಷರು :ಅಬ್ದುಲ್ ಮಜೀದ್ ಹರಿಯಮೂಲೆ , ಸಿದ್ದೀಕ್ ಉಚ್ಚಿಲ್ ಗ್ಯಾಸ್ಕೋ , ಫೈಸಲ್ ಸೀತಾಂಗೋಳಿ 
ಪ್ರಧಾನ ಕಾರ್ಯದರ್ಶಿ : ಜಲೀಲ್ ಗುರುಪುರ, ಕಾರ್ಯದರ್ಶಿಗಳು : ಬಶೀರ್ ಹರಿಯಮೂಲೆ , ಹಮೀದ್ ಗುರುಪುರ , ಜನಾಬ್ ಅಬ್ದುಲ್ ಖಾದರ್ ಕೊಪ್ಪಳ 
ಕೋಶಾಧಿಕಾರಿ : ಅಬ್ದುಲ್ ಖಾದರ್ ಕಾರ್ಕಳ, ಸಹ ಕೋಶಾಧಿಕಾರಿ : ಶಾಫಿ ಪೆರುವಾಯಿ 
ಸಂಘಟನಾ ಕಾರ್ಯದರ್ಶಿ : ಸರ್ಫ್ರಾಝ್ ಕುದ್ರೋಳಿ, ಲೆಕ್ಕ ಪರಿಶೋಧಕ : ಯಹ್ಯಾ ಕೊಡ್ಲಿಪೇಟೆ 
ಕನ್ವೀನರ್ ಗಳು : ಅಬ್ದುಲ್ ಮಜೀದ್ ಸೋಮೇಶ್ವರ್ ಉಚ್ಚಿಲ್ ,ಝಾಹಿದ್ ನಾಳ , ಅಬುಬಕ್ಕರ್ ಪಡ್ಡ0ತಡ್ಕ ,ಝಾಕಿರ್ ಕೆ.ಸಿ ರೋಡ್ , ಅಶ್ರಫ್ ಮಂಕುಡೆ ವಿಟ್ಲ , ಇಬ್ರಾಹಿಂ ಅಗ್ನಾಡಿ , ಇಸ್ಹಾಕ್ ಬಜ್ಪೆ , ಫೈಸಲ್ ಗುಣಾಜೆ , ಅಲ್ತಾಫ್ ಕುದ್ರೋಳಿ , ಅಬ್ದುಲ್ ಸಮದ್ ಮರಕ್ಕಿಣಿ 

ಕಾರ್ಯಕಾರಿ ಸಮಿತಿ ಸದಸ್ಯರು :
ಜನಾಬ್ ಶುಹೈಬ್ ಮುಕ್ವೆ, ಜನಾಬ್ ಸಫ್ವಾನ್ ಮುಕ್ವೆ, ಜನಾಬ್ ಜವಾದ್ ಮುಲಾರಪಟ್ಣ , ಜನಾಬ್ ಹಫೀಝ್ ತುಂಬೆ, ಜನಾಬ್ ಅಬ್ದುಲ್ ರಹ್ಮಾನ್ ಮಂಗಳೂರು, ಜನಾಬ್ ಶಮಾನ್ ಮಂಗಳೂರು, ಜನಾಬ್ ಜಲೀಲ್ ಕಿನ್ನಿಗೋಳಿ , ಜನಾಬ್ ಮಹಮ್ಮದ್ ಖಾಲಿದ್ ಕೈಕಂಬ, ಜನಾಬ್ ಬಶೀರ್ ಕಾವು , ಜನಾಬ್ ಬಶೀರ್ ಉಚ್ಚಿಲ್, ಜನಾಬ್ ಬಿ.ಕೆ ಮಹಮ್ಮದ್ ದೇರಲಕಟ್ಟೆ, ಜನಾಬ್ ಸಾದಿಕ್ ಬಿ.ಸಿ ರೋಡ್, ಜನಾಬ್ ಅಬ್ದುಲ್ ರಶೀದ್ ಜೆಪ್ಪು, ಜನಾಬ್ ಮಹಮ್ಮದ್ ಆಸಿಫ್ ಸೂರಲ್ಪಾಡಿ, ಜನಾಬ್ ಖಲಂದರ್ ಕನ್ನಂಗಾರ್ ಮೊದಲಾದವರನ್ನು ಆರಿಸಲಾಯಿತು.
ನೂತನ ಆದ್ಯಕ್ಷರಾಗಿ ಪುನರಾಯ್ಕೆಯಾದ ಜನಾಬ್ ರವೂಫ್ ಹಾಜಿಯವರು ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ಎಲ್ಲರ ಸಹಕಾರವನ್ನು ಯಾಚಿಸಿ 2017-18 ರ ಸಾಲಿನಲ್ಲಿ ಅಬುಧಾಬಿ ಸ್ಟೇಟ್ ಸಮಿತಿಯನ್ನು ಇನ್ನಷ್ಟು ಬಲಿಷ್ಠ ಗೊಳಿಸಿ ಸುಮಾರು 5 ನೂತನ ಶಾಖೆಗಳನ್ನು ರಚಿಸುವುದಾಗಿ ಭರವಸೆ ನೀಡಿದರು. ಜನಾಬ್ ಶಾಫಿ ಪೆರುವಾಯಿಯವರು ವಂದನೆಗೈದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News