17,35,391 ಹಜ್ ಯಾತ್ರಿಗಳ ಆಗಮನ

Update: 2017-08-29 17:29 GMT

ಜಿದ್ದಾ, ಆ. 29: ವಿದೇಶಗಳಿಂದ ಹಜ್‌ಗಾಗಿ ಈವರೆಗೆ 17,35,391 ಮಂದಿ ಆಗಮಿಸಿದ್ದಾರೆ ಎಂದು ಪಾಸ್‌ಪೋರ್ಟ್ಸ್ ಮಹಾ ನಿರ್ದೇಶನಾಲಯ ಸೋಮವಾರ ಘೋಷಿಸಿದೆ.

ವಿಮಾನದ ಮೂಲಕ ಹಜ್‌ಗೆ ಬಂದವರ ಸಂಖ್ಯೆ 16,31,979, ರಸ್ತೆ ಮೂಲಕ ಬಂದವರು 88,585 ಮತ್ತು ಸಮುದ್ರದ ಮೂಲಕ ಬಂದವರು 14,585 ಎಂದು ಜಿದ್ದಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಜರ್ ಜನರಲ್ ಸುಲೈಮಾನ್ ಅಲ್-ಯಾಹ್ಯ ಹೇಳಿದರು.

ರಸ್ತೆ, ಸಮುದ್ರ ಮತ್ತು ವಿಮಾನಗಳ ಮೂಲಕ ಬಂದ ಯಾತ್ರಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲು ಸೌದಿ ನಾಯಕತ್ವ ಉತ್ಸುಕವಾಗಿದೆ ಎಂದರು.
ವಿಶೇಷ ಆಡಳಿತ ಸಮಿತಿಗಳನ್ನು ರಚಿಸಲಾಗಿದೆ ಹಾಗೂ ಅವುಗಳನ್ನು ಮಕ್ಕಾದ ಅಶ್ ಶಿಮೈಸಿ, ತನೀಮ್, ಬೌಹೈಟ ಮತ್ತು ಕರ್ ಪ್ರವೇಶ ದ್ವಾರಗಳಲ್ಲಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News