ಸೌದಿ: 2.43 ಕೋಟಿ ಉದ್ಯೋಗಿಗಳಿಗೆ ವರ್ಕ್ ಪರ್ಮಿಟ್

Update: 2017-08-29 18:19 GMT

ರಿಯಾದ್, ಆ. 29: ಸೌದಿ ಅರೇಬಿಯದಲ್ಲಿ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಕಳೆದ ಮೂರು ವರ್ಷಗಳಲ್ಲಿ ನೀಡಲಾದ ವರ್ಕ್ ಪರ್ಮಿಟ್‌ಗಳ ಸಂಖ್ಯೆ 2.43 ಕೋಟಿಯನ್ನು ತಲುಪಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಹೊರಡಿಸಿದ ಅಂಕಿಸಂಖ್ಯೆಗಳು ಹೇಳಿವೆ.

ನೀಡಲಾದ ವರ್ಕ್ ಪರ್ಮಿಟ್‌ಗಳ ಪೈಕಿ ಸುಮಾರು 45 ಶೇಕಡವನ್ನು ಇಂಜಿನಿಯರಿಂಗ್ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ನೀಡಲಾಗಿದೆ.

ರಿಯಾದ್, ಮಕ್ಕಾ ಮತ್ತು ಈಸ್ಟರ್ನ್ ಪ್ರಾವಿನ್ಸ್‌ಗಳಲ್ಲಿ ವಿದೇಶಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಕ್ ಪರ್ಮಿಟ್‌ಗಳನ್ನು ಪಡೆದಿದ್ದಾರೆ.

ಸೌದಿ: ಮನೆಗೆಲಸದವರನ್ನು ನೇಮಿಸಲು ಶರತ್ತುಗಳು

ಮನೆಗೆಲಸದವರನ್ನು ನೇಮಿಸಿಕೊಳ್ಳಲು ಬಯಸುವವರಿಗೆ ವಿಧಿಸಲಾಗಿರುವ ಶರತ್ತುಗಳಿಗೆ ಸೌದಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿದೆ. ಈ ಶರತ್ತುಗಳು ಪ್ರಜೆಗಳು ಮತ್ತು ನಿವಾಸಿಗಳಿಗೆ ಅನ್ವಯವಾಗುತ್ತವೆ.

ಮನೆಗೆಲಸದವರು ಅಥವಾ ಚಾಲಕರನ್ನು ನೇಮಿಸಿಕೊಳ್ಳಲು ವಿವಾಹಿತ ನಾಗರಿಕರೊಬ್ಬರು ತನ್ನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 35,000 ಸೌದಿ ರಿಯಾಲ್ (ಸುಮಾರು 6 ಲಕ್ಷ ರೂಪಾಯಿ) ಹೊಂದಿರಬೇಕು ಹಾಗೂ ನಿವಾಸಿಗಳ ವೇತನವು 10,000 ಸೌದಿ ರಿಯಾಲ್ (ಸುಮಾರು 1.7 ಲಕ್ಷ ರೂಪಾಯಿ)ಗಿಂತ ಕಡಿಮೆ ಇರಬಾರದು ಎನ್ನುವುದು ಮಹತ್ವದ ಶರತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News