ಅಬುಧಾಬಿ: ದಾರುನ್ನೂರ್ ಅಲ್ ಅಸಬ್ ನೂತನ ಶಾಖೆ ರಚನೆ

Update: 2017-09-03 17:20 GMT

ಅಬುಧಾಬಿ, ಸೆ. 3: ದಾರುನ್ನೂರ್ ಅಬುಧಾಬಿ ಸ್ಟೇಟ್ ಸಮಿತಿ ವತಿಯಿಂದ ಅಬೂಬಕರ್ ಸಿದ್ದೀಕ್ ಉಚ್ಚಿಲ್ ರವರ ನಿವಾಸದಲ್ಲಿ ದಾರುನ್ನೂರ್ ಇದರ ಅಬುಧಾಬಿಯ ನೂತನ ಶಾಖೆಯನ್ನು ರಚಿಸಲಾಯಿತು.

ದಾರುನ್ನೂರ್ ಅಬುಧಾಬಿ ಸ್ಟೇಟ್ ಪ್ರೆಸಿಡೆಂಟ್ ರವೂಫ್ ಹಾಜಿ ಕೈಕಂಬ ಅವರು ದಾರುನ್ನೂರ್  ಶಾಖೆಯನ್ನು ರಚಿಸುವ ಪ್ರಸ್ತಾಪ ಮುಂದಿಟ್ಟರು . ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರೆ ಇದರ ವಿವರವನ್ನು ನೀಡಿ ದಾರುನ್ನೂರ್ ಸಮುಚ್ಚಯದಲ್ಲಿ ಬರಲಿರುವ 9 ವಿವಿಧ ವಿದ್ಯಾ ಕೇಂದ್ರಗಳ ಯೋಜನೆಗಳನ್ನು ಮತ್ತು ತಕ್ಷಣ ನಿರ್ಮಾಣ ಕಾರ್ಯ ಆರಂಭಗೊಳ್ಳಲಿರುವ ವನಿತಾ ವಿದ್ಯಾಲಯದ  ಯೋಜನೆ ಮತ್ತು ಕಳೆದ 4 ವರ್ಷಗಳಿಂದ  ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕದ ವಿವಿಧ ಪ್ರದೇಶದ ಮಕ್ಕಳ ಬಗ್ಗೆ ರವೂಫ್ ಹಾಜಿಯವರು ವಿವರಿಸಿದರು. ಅಬೂಬಕರ್ ಸಿದ್ದೀಕ್ ಉಚ್ಚಿಲ್ ಮತ್ತು ಕರಾವಳಿಯ ಯುವಕರು ಆಕರ್ಷಿತರಾಗಿ ದಾರುನ್ನೂರಿನ ಒಂದು ಘಟಕವನ್ನು ಸ್ಥಾಪಿಸಲು ಒಪ್ಪಿಗೆಯನ್ನು ಸೂಚಿಸಿದರು.

ದಾರುನ್ನೂರ್ ಅಬುಧಾಬಿ ಸ್ಟೇಟ್ ಸಮಿತಿಯ ಅಧೀನದಲ್ಲಿ ದಾರುನ್ನೂರ್ ಅಲ್ ಅಸಬ್ ಎಂಬ ಪ್ರಥಮ ಶಾಖೆಗೆ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಉಚ್ಚಿಲ್, ಉಪಾಧ್ಯಕ್ಷರಾಗಿ ಅಬ್ದುಲ್ ಸಲೀಂ ಪಲ್ಲಂಗಿತ್ಲು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಉಚ್ಚಿಲ್, ಕಾರ್ಯದರ್ಶಿಯಾಗಿ ಅಕ್ಬರ್ ಬಂಡಸಾಲೆ ಮಂಜೇಶ್ವರ್, ಕೋಶಾಧಿಕಾರಿ ಇಮ್ರಾನ್ ಅಯೂಬ್ ಕೆ.ಸಿ ರೋಡ್, ಕನ್ವೀನರ್ ಗಳಾಗಿ  ನವಾಝ್ ಉಚ್ಚಿಲ್, ಯಹ್ಯಾ ಮಹಮ್ಮದ್ ಉಚ್ಚಿಲ್, ಮಹಮ್ಮದ್ ಉಚ್ಚಿಲ್,  ಅಯೂಬ್ ಉಚ್ಚಿಲ್, ಅಝೀಝ್ ಕರಿಯಾಡಿ ಉಚ್ಚಿಲ್, ಅನಸ್ ಉಪ್ಪಳ, ಶಾಕಿರ್ ಉಪ್ಪಳ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಸ್ಮಾಯಿಲ್ ಮಹಮ್ಮದ್ ಉಚ್ಚಿಲ್ , ಅಬ್ದುಲ್ ಹಮೀದ್ ಉಚ್ಚಿಲ್,  ಅಬ್ದುಲ್ ನಾಸಿರ್ ಉಚ್ಚಿಲ್, ರಿಝ್ವಾನ್ ಖಾದರ್ ಉಚ್ಚಿಲ್,  ನಝೀರ್ ಲತೀಫ್ ಉಚ್ಚಿಲ್,  ಅಬ್ದುಲ್ ರಹ್ಮಾನ್ ಬೋನಿ ಮಂಗಳೂರು,  ಜವ್ಹರ್ ಬೆಳ್ತಂಗಡಿ,  ಅಬ್ದುಲ್ ರಹ್ಮಾನ್ ರೋಝನ್ ಮಂಗಳೂರು,  ಮಹ್ಫೂಝ್ ಇಹ್ಸಾನ್  ಕಲ್ಲಾಪು,  ಫಿರೋಝ್ ಕುಂಜತ್ತೂರ್,  ಇಬ್ರಾಹಿಂ ಖಲೀಲ್ ಉಳ್ಳಾಲ,  ಶಫಫ್ ಹಸನ್  ಮಂಗಳೂರು, ಅಬ್ದುಲ್ ಸಲಾಂ ಉಳ್ಳಾಲ ,  ಉನೈಸ್ ಬಿ.ಸಿ ರೋಡ್,  ಹಸನ್ ಉಪ್ಪಳ,  ನೌಶಾದ್ ಯು ಕೆ ಉಚ್ಚಿಲ್,  ಸರ್ಫ್ರಾಝ್  ಯು ಕೆ ಉಚ್ಚಿಲ್,  ಅಶ್ರಫ್ ಯು.ಕೆ ಉಚ್ಚಿಲ್, ಹನೀಫ್ ಕಟ್ಟೆಪುಣಿ ಕೆ.ಸಿ ರೋಡ್,  ಮಹಮ್ಮದ್ ಆಶಿಕ್ ಉಚ್ಚಿಲ್ ಮೊದಲಾದವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News