ಗೌರಿ ಲಂಕೇಶ್ ಹತ್ಯೆ: ಐಎಸ್ಎಫ್ ಕುವೈಟ್ ಖಂಡನೆ
Update: 2017-09-06 22:52 IST
ಕುವೈಟ್,ಸೆ.6: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಜಾತ್ಯಾತೀತತೆಯ ಪ್ರಬಲ ಪ್ರತಿಪಾದಕಿ, ತನ್ನ ತೀಕ್ಷ್ಣ ಬರಹಗಳಿಂದ ಫ್ಯಾಸಿಸ್ಟ್ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿದ್ದ ಗೌರಿ ಲಂಕೇಶ್ ಬರ್ಬರ ಹತ್ಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಖಂಡಿಸಿದೆ. ಗೌರಿಯವರ ಹತ್ಯೆಯಿಂದ ಕರ್ನಾಟಕದ ಜಾತ್ಯಾತೀತ ಹೋರಾಟದ ಧ್ವನಿಯು ಕ್ಷೀಣಗೊಂಡಂತಾಗಿದ್ದು, ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.
ಗೌರಿ ಲಂಕೇಶ್ ಬಲಿದಾನವು ಕನ್ನಡ ನಾಡಿನಾದ್ಯಂತ ಫ್ಯಾಸಿಸ್ಟ್ ವಿರುದ್ಧ ತೀಕ್ಷ್ಣ ಹೋರಾಟಕ್ಕೆ ನಾಂದಿಯಾಗಬೇಕಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಪತ್ರಿಕಾ ಪ್ರಕಟನೆಯ ಮೂಲಕ ಕರೆ ನೀಡಿದೆ.