ಯುಎಇ: ವಿಮಾನ ಹಾರಿಸಿದ ಭಾರತ ಮೂಲದ 14 ವರ್ಷದ ಬಾಲಕ

Update: 2017-09-07 16:26 GMT

ದುಬೈ, ಸೆ. 7: ಯುಎಇಯಲ್ಲಿ ವಾಸಿಸುತ್ತಿರುವ 14 ವರ್ಷದ ಭಾರತ ಮೂಲದ ಬಾಲಕ ಒಂಟಿ ಇಂಜಿನ್ ವಿಮಾನವನ್ನು ಹಾರಿಸಿದ್ದು, ಅತ್ಯಂತ ಕಿರಿಯ ಪೈಲಟ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಶಾರ್ಜಾದ ಡೆಲ್ಲಿ ಪ್ರೈವೇಟ್ ಸ್ಕೂಲ್‌ನಲ್ಲಿ ಒಂಭತ್ತನೆ ತರಗತಿ ವಿದ್ಯಾರ್ಥಿಯಾಗಿರುವ ಮನ್ಸೂರ್ ಅನೀಸ್, ತನ್ನ ಪ್ರಥಮ ಏಕಾಂಗಿ ಹಾರಾಟಕ್ಕಾಗಿ ಕಳೆದ ವಾರ ಕೆನಡದ ವಿಮಾನಯಾನ ಅಕಾಡೆಮಿಯೊಂದರಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಹತ್ತು ನಿಮಿಷ ಅವಧಿಯ ಹಾರಾಟದಲ್ಲಿ, ಅನೀಸ್ ವಿಮಾನವನ್ನು ಪಾರ್ಕಿಂಗ್ ಬೇಯಿಂದ ರನ್‌ವೇಗೆ ತಂದು ನಿಲ್ಲಿಸಿದರು, ಐದು ನಿಮಿಷಗಳ ಕಾಲ ವಿಮಾನವನ್ನು ಹಾರಿಸಿದರು ಹಾಗೂ ವಿಮಾನ ನಿಲ್ದಾಣದಲ್ಲಿ ಇಳಿಸಿದರು ಎಂದು ವರದಿ ಹೇಳಿದೆ.

ಸೆಸ್ನ 152 ವಿಮಾನವನ್ನು ಹಾರಿಸಿದ ಮನ್ಸೂರ್ ಈಗ ವಿದ್ಯಾರ್ಥಿ ಪೈಲಟ್ ಪರ್ಮಿಟ್ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News