ಯುಎಇ: ಭಾರತೀಯರಿಗಾಗಿ ಶಾರ್ಜಾದಲ್ಲಿ ಸಹಾಯ ಕೇಂದ್ರ

Update: 2017-09-10 18:09 GMT

ಶಾರ್ಜಾ,ಸೆ.10: ಯುಎಇನಲ್ಲಿನ ಭಾರತೀಯರ ಅಹವಾಲುಗಳಿಗೆ ಸ್ಪಂದಿಸಲು ಭಾರತೀಯ ರಾಯಭಾರಿ ಕಚೇರಿಯು ಶಾರ್ಜಾದಲ್ಲಿ ಭಾರತೀಯ ಉದ್ಯೋಗಿಗಳ ಸಂಪನ್ಮೂಲ ಕೇಂದ್ರ(ಐಡಬ್ಲುಆರ್‌ಸಿ) ವನ್ನು ರವಿವಾರ ಆರಂಭಿಸಿದೆ.

ಶಾಜಾದ ದಾಮಾಸ್ ಟವರ್‌ನಲ್ಲಿರುವ 22ನೇ ಅಂತಸ್ತಿನಲ್ಲಿ ಈ ಕೇಂದ್ರವು ಕಾರ್ಯಾಚರಿಸಲಿದೆ. ಯುಎಇನಲ್ಲಿ ಸಂಕಷ್ಟಕ್ಕೀಡಾದ ಭಾರತೀಯರು ತಮ್ಮ ಅಹವಾಲುಗಳನ್ನು ಈ ಕೇಂದ್ರಕ್ಕೆ ನೇರವಾಗಿ ಸಲ್ಲಿಸಬಹುದಾಗಿದೆ. ಶನಿವಾರದಿಂದ ಗುರುವಾರದವರೆಗೆ ಬೆಳಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಐಡಬ್ಲುಆರ್‌ಸಿ ಕಾರ್ಯಾಚರಿಸಲಿದೆಯೆಂದು ಯುಎಇನಲ್ಲಿನ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.

 ದುಬೈನಲ್ಲಿ ಈಗಾಗಲೇ ಐಡಬ್ಲುಆರ್‌ಸಿ ಕೇಂದ್ರವಿದ್ದು, ಅದನ್ನು 2010 ನವೆಂಬರ್‌ನಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News