ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮ

Update: 2017-09-11 15:47 GMT

ಅಲ್ ಹಸ್ಸಾ, ಸೆ. 11: ಅನಿವಾಸಿ ಕನ್ನಡಿಗರ ಅಭಿಮಾನ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಸೆಕ್ಟರ್ ಅಧ್ಯಕ್ಷ ಹಾರೀಸ್ ಕಾಜೂರ್ ರ ಅಧ್ಯಕ್ಷತೆಯಲ್ಲಿ ಹೆಚ್ ವಿ ಸಿ ಕಾರ್ಯಕರ್ತರಿಗೆ ಸನ್ಮಾನ, ಮಾಸಿಕ ಸ್ವಲಾತ್, ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ಸಹದಿಯಾ ಹಾಲ್ ಅಲ್ ಹಸ್ಸಾದಲ್ಲಿ ನಡೆಯಿತು.

ಝಕರಿಯ ಉಸ್ತಾದರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ನಡೆಯಿತು. ಸೆಕ್ಟರ್ ಕಾರ್ಯದರ್ಶಿ ಸ್ವಾಗತ ಮಾಡಿದರು. ಹಬೀಬ್ ಮಾರ್ದಳ ಕಿರಾಅತ್ ಪಠಿಸಿದರು.  ಕೆಸಿಎಫ್ ಸೌದಿ ಅರೆಬಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಸಭೆಯನ್ನು ಉದ್ಘಾಟಿಸಿದರು.

ಕೆಸಿಎಫ್ ಕಾರ್ಯಕರ್ತರು ಹಜ್ಜಾಜ್ ಗಳಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಸೌದಿ ಹೆಲ್ತ್ ಮಿನಿಸ್ಟ್ರಿಯಿಂದ  ಸತತ 3ನೆ ಬಾರಿಗೆ ಪ್ರಶಸ್ತಿ ಪತ್ರ ಹಾಗೂ ಮುಂದಿನ ವರ್ಷಗಳಲ್ಲಿ ಸರಕಾರಿ ಆಸ್ಪತ್ರೆಯ ಒಳಗಡೆ ಹಜ್ಜಾಜಿಗಳ ಸೇವೆ ಮಾಡಲು ಸಂಪೂರ್ಣ ಪ್ರವೇಶ ನೀಡಲಿದ್ದಾರೆ ಎಂಬ ತಿಳಿಸಿದರು.

ಹಜ್ ವ್ಯಾಲೆಂಟಿರ್ ಕೋರ್ ಚಯರ್ಮೇನ್ ಹನೀಫ್ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಜ್ಜಾಜಿಗಳ ಸೇವೆ ಮಾಡಿದ ಕಾರ್ಯಕರ್ತರನ್ನು ಪ್ರಶಂಶಿದರು. ಕೆಸಿಎಫ್ ದಮಾಂ ಝೋನ್ ರಿಲೀಫ್ ಚಯರ್ಮೇನ್ ಶಫೀಖ್ ಕಾಟಿಪಳ್ಳ ರಿಲೀಫ್ ನ ಬಗ್ಗೆ ಮಾತನಾಡಿದರು.

 ಹಜ್ಜಾಜಿಗಳ ಸೇವೆ ಮಾಡಿದ ಎಚ್ ವಿ ಸಿ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿ ಕಾರ್ಯಕರ್ತರು ತಮ್ಮ ಅನುಭವಗಳನ್ನು ವಿವರಿಸಿದರು. ನಂತರ ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು .

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನಾಯಕ ಕೆಎಂ ಮುಸ್ತಫಾ ನಯೀಮೀ ಮುಖ್ಯ ಪ್ರಭಾಷಣ ಮಾಡಿ.‌ ದೀನ್ ಏನೆಂದು ಅರಿಯದ ಉತ್ತರ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಪೊಸೋಟ್ ತಂಙಳರ ನಿರ್ದೆಶನದ ಮೇರೆಗೆ ಮುಹೀನುಸುನ್ನ  ಸ್ಥಾಪಿಸಿ ಅಲ್ಲಿ ನಡೆಯುತ್ತಿರುವ ದಿನೀ ಕಾರ್ಯಚಟುವಟಿಕೆಯನ್ನ ವಿವರಿಸಿ   ಪೊಸೋಟ್ ತಂಙಳರಿಗಿರುವ ದೀನೀ   ಪ್ರೇಮವನ್ನು ಅನುಸ್ಮರಿಸಿದರು. ನಂತರ  ಮುಸ್ತಫಾ ನಹೀಮಿಯ ನೇತೃತ್ವದಲ್ಲಿ ಮುಹೀನುಸುನ್ನ ಅಲ್ ಹಸ್ಸಾ ಸಮಿತಿ  ರಚಿಸಲಾಯಿತು.

ಅಧ್ಯಕ್ಷರಾಗಿ ರಹಿಮಾನ್ ಕೈರಂಗಳ, ಉಪಾಧ್ಯಕ್ಷರಾಗಿ ಹಾರಿಸ್ ಕಾಜೂರ್, ಕಾರ್ಯದರ್ಶಿಯಾಗಿ ಅಶ್ರಫ್, ಜೊತೆ ಕಾರ್ಯದರ್ಶಿಯಾಗಿ ಕೆ.ಎಂ. ಇರ್ಶಾದ್ ಪಕ್ಷಿಕೆರೆ, ಇಸ್ಹಾಕ್ ಫಜೀರ್, ಸಂಘಟನ ಕಾರ್ಯದರ್ಶಿಯಾಗಿ ಹಕೀಂ ನೆಕ್ಕರೆ, ಕೋಶಾಧಿಕಾರಿಯಾಗಿ ಅಶ್ರು ಬಜ್ಪೆ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಬರ್ಮ ಮುಸಲ್ಮಾನರಿಗೆ  ವಿಶೇಷ ಪ್ರಾರ್ಥನೆ ನಡೆಸಲಾಯಿತು. ಕೆಎಂ ಇರ್ಶಾದ್ ಪಕ್ಷಿಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News