'ಬದ್ರುಲ್ ಹುದಾ ಗಲ್ಫ್ ಬ್ರದರ್ಸ್‌ ಮುರ ನಾವೂರು' ಪದಾಧಿಕಾರಿಗಳ ಆಯ್ಕೆ

Update: 2017-09-11 14:38 GMT
ಎನ್.ಎಸ್. ಮುಹಮ್ಮದ್

ರಿಯಾದ್, ಸೆ. 11: ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಮುರ ಜಮಾತಿಗೊಳಪಟ್ಟ ವಿದೇಶಿ ಉದ್ಯೋಗಿಗಳ ಸಂಘಟನೆ ಬದ್ರುಲ್ ಹುದಾ ಗಲ್ಫ್ ಬ್ರದರ್ಸ್ ಇದರ ವಾರ್ಷಿಕ ಮಹಾಸಭೆಯು ಇಬ್ರಾಹೀಂ ಅಳಕೆ  ಅಧ್ಯಕ್ಷತೆಯಲ್ಲಿ  ನಡೆಯಿತು.

ಮುರ ಜಮಾತಿನ ಖತೀಬ್ ಸೈಯದ್ ಇಂಬಿಚ್ಚಿಕೋಯ ತಂಙಳ್ ಸಭೆಗೆ ಚಾಲನೆ ನೀಡಿದರು. ಅಶ್ರಫ್ ಎ.ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಆಸಿಫ್ ಅಬೂಬಕರ್ ನಾವೂರು ವರದಿ ಮಂಡಿಸಿದರು. ನಂತರ ನಿರ್ದೇಶಕ ಅಬ್ದುಲ್ ರಝಾಕ್ ನಾವೂರು ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಎನ್.ಎಸ್. ಮುಹಮ್ಮದ್ ನಾವೂರು (ಅಬುಧಾಬಿ)ನೂತನ ಅಧ್ಯಕ್ಷರಾಗಿ, ಅಶ್ರಫ್ ಎ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಪದಾಧಿಕಾರಿಗಳಾಗಿ ಇಬ್ರಾಹೀಂ ಅಳಕೆ ಮುರ (ಗೌರವಾಧ್ಯಕ್ಷರು), ಅಬ್ದುಲ್ ರಝಾಕ್ ನಾವೂರು (ನಿರ್ದೇಶಕರು), ಇಲ್ಯಾಸ್ ಮದನಿ ಮುರ, ಪಿ.ವೈ.ಅಬ್ದುಲ್ ರಹಿಮಾನ್ ಮುರ ( ಉಪಾಧ್ಯಕ್ಷರುಗಳು), ಇಸ್ಹಾಕ್ ಮುರ, ಮುಹಮ್ಮದ್ ಸ್ವಾದಿಖ್ ನಾವೂರು (ಜೊತೆ ಕಾರ್ಯದರ್ಶಿಗಳು), ಎನ್.ಎಚ್.ಇಬ್ರಾಹೀಂ ನಾವೂರು (ಕೋಶಾಧಿಕಾರಿ), ಅಬೂಬಕರ್ ಆಸಿಫ್ ನಾವೂರು (ಲೆಕ್ಕ ಪರಿಶೋಧಕರು), ಇಕ್ಬಾಲ್ ಮುರ, ಇಲ್ಯಾಸ್ ಮದನಿ ಮುರ( ಧಾರ್ಮಿಕ ಸಲಹೆಗಾರರು) ಹಾಗೂ ವಿವಿಧ ಗಲ್ಫ್ ರಾಷ್ಟ್ರಗಳಿಗೆ ಕೋ ಆರ್ಡಿನೇಟರ್‌ಗಳಾಗಿ ಹಮೀದ್ ಅಲ್ಲಾಜೆ (ಸೌದಿ ಅರೇಬಿಯಾ), ಅಬೂಬಕರ್ ಕೋಡಿಕನ್ನಾಜೆ (ಯುಎಇ), ಮುಹಮ್ಮದ್ ಜಾಬಿರ್ ನಿರಂದಿ (ಕುವೈತ್ ಮತ್ತು ಬಹ್ರೈನ್), ಮುಈನುದ್ದೀನ್ ನಾವೂರು ( ಕತರ್ ಮತ್ತು ಒಮಾನ್), ಅಬೂಸಾಲಿಹ್ ನಾವೂರು (ಭಾರತ) ಇವರನ್ನು ಆರಿಸಲಾಯಿತು. ಪಿ.ವೈ.ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News