4 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಕರ ನಿರ್ಗಮನ

Update: 2017-09-12 16:46 GMT

ಜಿದ್ದಾ, ಸೆ. 12: ಶನಿವಾರದವರೆಗೆ 4 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಗಳು ಸೌದಿ ಅರೇಬಿಯದಿಂದ ಹೊರಟಿದ್ದಾರೆ ಎಂದು ಪಾಸ್‌ಪೋರ್ಟ್ಸ್ ಮಹಾನಿರ್ದೇಶನಾಲಯ ಹೇಳಿದೆ.

‘‘ಒಟ್ಟು 4,07220 ಯಾತ್ರಿಕರು ಸೌದಿ ಅರೇಬಿಯವನ್ನು ತೊರೆದಿದ್ದಾರೆ. ಭೂ ಗಡಿದಾಟುಗಳ ಮೂಲಕ 42,893, ವಿಮಾನ ನಿಲ್ದಾಣಗಳ ಮೂಲಕ 3,59,508 ಮತ್ತು ಬಂದರುಗಳ ಮೂಲಕ 4,819 ಯಾತ್ರಿಗಳು ಸೌದಿ ಅರೇಬಿಯದಿಂದ ಹೊರಟಿದ್ದಾರೆ’’ ಎಂದು ನಿರ್ದೇಶನಾಲಯ ಹೇಳಿದೆ.

ಹಜ್ ವೀಸಾ ಅವಧಿ ಮುಗಿದ ಬಳಿಕ ಸೌದಿ ಅರೇಬಿಯದಲ್ಲಿ ಉಳಿಯುವ ಯಾತ್ರಿಕರಿಗೆ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಅದು ಎಚ್ಚರಿಸಿದೆ. ಮಕ್ಕಾ, ಜಿದ್ದಾ ಮತ್ತು ಮದೀನಾದಿಂದ ಹೊರ ಹೋಗದಂತೆಯೂ ಯಾತ್ರಿಕರಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News