ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್: ಮಾಸಿಕ ಸ್ವಲಾತ್ ಮಜ್ಲಿಸ್; ನೂತನ ಸಮಿತಿ ರಚನೆ

Update: 2017-09-15 13:38 GMT

ರಿಯಾದ್, ಸೆ. 15:ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್  ಮೂಡುಬಿದಿರೆ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನೂತನ ರಿಯಾದ್ ಸಮಿತಿಯ ರಚನಾ ಕಾರ್ಯಕ್ರಮ ಅಬ್ದುಲ್ ರಹಿಮಾನ್ ಗಂಟಲ್ಕಟ್ಟೆಯವರ ನಿವಾಸದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಹಬೀಬುಲ್ಲಾ ಟಿ.ಎಚ್. ಕಿರಾಅತ್ ಪಠಿಸಿದರು. ಅಶ್ರಫ್ ಕಿಲ್ಲೂರು ಸ್ವಾಗತಿಸಿದರು. ಹಿರಿಯ ನೇತಾರ ನಝೀರ್ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಕರೀಂ ಲತೀಫ, ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ನ ಅಧೀನದಲ್ಲಿ ನಡೆಯುತ್ತಿರುವ ಮಹಿಳಾ ಶರೀಅತ್ ಕಾಲೇಜು ಹಾಗೂ ಇತರ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಅಬ್ದುಲ್ ಹಮೀದ್ ದಾರುಲ್ ಫಲಾಹ್ ಹೊಸಂಗಡಿ ಮತ್ತು ಅಬ್ದುಲ್ ರಹಿಮಾನ್ ಗಂಟಲ್ಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಲ್ ಮಫಾಝ್ ರಿಯಾದ್ ನೂತನ ಪದಾಧಿಕಾರಿಗಳು 

ಗೌರವಾಧ್ಯಕ್ಷರಾಗಿ ಕರೀಂ ಲತೀಫಿ ಬೇಂಗಿಲ, ಸಲಹೆಗಾರರಾಗಿ ನಝೀರ್ ಕಾಶಿಪಟ್ಣ, ಹಂಝ ಮೈಂದಾಳ, ರಹ್ಮಾನ್ ಗಂಟಾಲ್ಕಟ್ಟೆ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ದಾರುಲ್ ಫಲಾಹ್ ಹೊಸಂಗಡಿ, ಉಪಾಧ್ಯಕ್ಷರಾಗಿ ಶರೀಫ್ ಕೋಲ್ಪೆ, ಅಬ್ದುಲ್ ಮಜೀದ್ ಹೊಸಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಗಂಟಲ್ಕಟ್ಟೆ, ಸಹಕಾರ್ಯದರ್ಶಿ ತಕ್ವೀದ್ ಗಂಟಲ್ಕಟ್ಟೆ, ಶಬೀರ್ ಉಜಿರೆ, ಕೋಶಾಧಿಕಾರಿ ಅಲ್ತಾಫ್ ಗಂಟಲ್ಕಟ್ಟೆ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು
ಹಾಗೂ ಸದಸ್ಯರುಗಳಾಗಿ ಹಬೀಬುಲ್ಲಾ ಟಿ.ಎಚ್., ಅಬ್ದುಲ್ ರಹಿಮಾನ್ ಪುಚ್ಚಮೊಗರು, ಅಬ್ರಾರ್ ಗಂಟಲ್ಕಟ್ಟೆ, ಅಬ್ಬಾಸ್ ಗಂಟಲ್ಕಟ್ಟೆ, ಖಲೀಲ್ ಕಾಜೂರು, ಇಬ್ರಾಹೀಂ ಪೆರಾಡಿ, ಮುನೀರ್ ಬಜಾಲ್ ಆಯ್ಕೆಯಾದರು. ನೂತನ ಕಾರ್ಯದರ್ಶಿ ಇಕ್ಬಾಲ್ ಗಂಟಲ್ಕಟ್ಟೆ ವಂದಿಸಿದರು. 

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News