ಕುವೈತ್‌ನಿಂದ ಉ.ಕೊರಿಯ ರಾಯಭಾರಿ, ರಾಜತಾಂತ್ರಿಕರ ಉಚ್ಚಾಟನೆ

Update: 2017-09-17 18:13 GMT

ಕುವೈತ್‌ಸಿಟಿ,ಸೆ.17: ತೈಲಸಮೃದ್ಧ ರಾಷ್ಟ್ರವಾದ ಕುವೈತ್, ಉತ್ತರ ಕೊರಿಯದ ರಾಯಭಾರಿ ಹಾಗೂ ಇತರ ನಾಲ್ವರು ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸಿದೆ. ಇತ್ತೀಚಿನ ವಾರಗಳಲ್ಲಿ ಉತ್ತರ ಕೊರಿಯದ ಜೊತೆ ತನ್ನ ಬಾಂಧವ್ಯದ ಬಗ್ಗೆ ಕುವೈತ್ ನೀಡಿದ ದ್ವಂದ್ವಯುತವಾದ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿದ ಬಳಿಕ ಅದು ಈ ಕ್ರಮಕ್ಕೆ ಮುಂದಾಗಿದೆ. ಉತ್ತರ ಕೊರಿಯವು ಇತ್ತೀಚೆಗೆ ನಡೆಸಿದ ಹೈಡ್ರೋಜನ್ ಬಾಂಬ್ ಪರೀಕ್ಷೆ ಹಾಗೂ ಜಪಾನ್ ಮೇಲೆ ಪ್ರಕ್ಷೇಪ ಕ್ಷಿಪಣಿಗಳನ್ನು ಎಸೆದ ಘಟನೆಯ ಬಳಿಕ ಆ ದೇಶದ ಜೊತೆ ಮೈತ್ರಿಯನ್ನು ಕಡಿದುಕೊಳ್ಳುವಂತೆ ಅಮೆರಿಕವು ಕುವೈತ್ ಸೇರಿದಂತೆ ತನ್ನ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರಿತ್ತು.

ಪ್ರಸ್ತುತ ಗಲ್ಫ್ ರಾಷ್ಟ್ರಗಳ ಪೈಕಿ ಕುವೈತ್‌ನಲ್ಲಿ ಮಾತ್ರವೇ ಉತ್ತರ ಕೊರಿಯಾ ತನ್ನ ರಾಜತಾಂತ್ರಿಕ ನೆಲೆಯನ್ನು ಹೊಂದಿದೆ. ಕುವೈತ್, ಓಮನ್,ಕತರ್ ಹಾಗೂ ಯುಎಇನಲ್ಲಿ ಉತ್ತರ ಕೊರಿಯದ ಸಹಸ್ರಾರು ಪ್ರಜೆಗಳು ಉದ್ಯೋಗದಲ್ಲಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಕುವೈತ್, ಉತ್ತರ ಕೊರಿಯ ರಾಯಭಾರಿ ಚಾಂಗ್ ಸಿಕ್ ಹಾಗೂ ಇತರ ನಾಲ್ವರು ರಾಜತಾಂತ್ರಿಕ ಸಿಬ್ಬಂದಿಯನ್ನು ಉಚ್ಚಾಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News