ಮಕ್ಕಾ, ಮದೀನಾ, ರಿಯಾದ್‌ನಲ್ಲಿ ಸೌದಿಯ 60 ಶೇ. ಜನ ವಾಸ

Update: 2017-09-18 17:29 GMT

ರಿಯಾದ್, ಸೆ. 18: ಸೌದಿ ಅರೇಬಿಯದ ಒಟ್ಟು ಜನಸಂಖ್ಯೆಯ ಸುಮಾರು 60 ಶೇಕಡ ಜನರು ಮಕ್ಕಾ, ಮದೀನಾ ಮತ್ತು ರಿಯಾದ್ ವಲಯಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ದೇಶದ ಜನಸಂಖ್ಯೆಯು 2017ರ ಮೊದಲಾರ್ಧದಲ್ಲಿ 3.26 ಕೋಟಿ ಆಗಿತ್ತು.

ಇದು 2016ರ ಅಂತ್ಯಕ್ಕೆ ಹೋಲಿಸಿದರೆ 8.70 ಲಕ್ಷದಷ್ಟು ಹೆಚ್ಚಾಗಿದೆ.

ಈ ಮೂರು ವಲಯಗಳ ಒಟ್ಟು ವಿಸ್ತೀರ್ಣ ದೇಶದ ಒಟ್ಟು ವಿಸ್ತೀರ್ಣವಾದ 21.50 ಲಕ್ಷ ಚದರ ಕಿಲೋಮೀಟರ್‌ನ ಸುಮಾರು 20 ಶೇಕಡದಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News