ಅ. 6: ಕೆಸಿಎಫ್ ಯುಎಇ ಅಸ್ಸುಫ್ಫಾ ಪರೀಕ್ಷೆ

Update: 2017-09-19 09:20 GMT

ಯುಎಇ, ಸೆ.19: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಧಾರ್ಮಿಕ ರಂಗದಲ್ಲಿ ಅರಿವಿನ ಬೆಳಕನ್ನು ಚೆಲ್ಲಿ ಇಸ್ಲಾಮಿ ಜೀವನದ ಬಗ್ಗೆ ತಿಳಿಸುವ ನಿಗದಿತ ಸಿಲಬಸ್ ನೊಂದಿಗೆ ಯುಎಇಯಾದ್ಯಂತ ಇಪ್ಪತ್ತಕ್ಕೂ ಹೆಚ್ಚು ಕೇಂದ್ರಗಳಲ್ಲಿ, ತರಬೇತಿ ಪಡೆದ ಟ್ಯೂಟೆರ್ಸ್ ಗಳಿಂದ ಪ್ರತಿವಾರ ನಡೆಯುತ್ತಿದ್ದ ಸಿಲಬಸ್ ಆಧಾರಿತ ದ್ವಿತೀಯ ಹಂತದ ಅಸ್ಸುಫ್ಫಾ ತರಗತಿಯ ಪರೀಕ್ಷೆಯು ಅಕ್ಟೋಬರ್ 6ರಂದು ನಡೆಯಲಿದೆ. 

ಕೆಸಿಎಫ್ ಸದಸ್ಯರಿಗಾಗಿ ಇಸ್ಲಾಮಿನ ನೈಜ ತತ್ವಾದರ್ಶಗಳನ್ನು ತಿಳಿಯಪಡಿಸಲು ಇಸ್ಲಾಮಿಕ್ ಸಿಲಬಸ್ ಆಧಾರದಲ್ಲಿ ನುರಿತ ವಿದ್ವಾಂಸರ ಉಸ್ತುವಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗಲ್ಫ್ ರಾಷ್ಟ್ರಾದ್ಯಂತ ಪ್ರಾರಂಭಗೊಂಡ ಆಸ್ಸುಫ್ಫಾ ತರಗತಿಯು ಯಶಸ್ವಿಯ ಮಜಲುಗಳನ್ನು ಏರಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಚೆಲ್ಲಿದೆ. ಯುಎಇ ಯಾದ್ಯಂತ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಹಂತದಲ್ಲಿ ತರಬೇತಿಯನ್ನು ಪಡೆದಿದ್ದು, ಆರು ತಿಂಗಳ ಕಾಲ ನಡೆದ ತರಗತಿಯ ಪರೀಕ್ಷೆಯು ಅ.6ರಂದು  ಯುಎಇ ಯ ಆಯ್ದ ಹತ್ತು ಕೇಂದ್ರಗಳಲ್ಲಿ ಏಕ ಕಾಲಕ್ಕೆ ನಡೆಯಲಿದೆ.

ಅಸ್ಸುಫ್ಫಾ ತರಗತಿಯಲ್ಲಿ ಭಾಗವಹಿಸಿ ಈಗ ಊರಿನಲ್ಲಿರುವ ವಿದ್ಯಾರ್ಥಿಗಳಿಗೆ ಊರಿನಲ್ಲಿಯೂ ಸಹ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. 
ಪರೀಕ್ಷೆಗೆ ಹೆಸರನ್ನು ನೋಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳು  ಪರೀಕ್ಷಾ ಟಿಪ್ಪಣಿಯನ್ನು ಆಯಾ ಕೇಂದ್ರಗಳಿಂದ ಪಡೆಯಬೇಕೆಂದು ಅಸ್ಸುಫ್ಫಾ ಪರೀಕ್ಷಾ ಮಂಡಳಿ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಇಬ್ರಾಹಿಂ ಸಖಾಫಿ ಕೆದುಂಬಾಡಿ ಮತ್ತು ಅಬ್ದುಲ್ ಜಲೀಲ್ ನಿಝಾಮಿ ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News