ಸೌದಿ: ಇಂಟರ್‌ನೆಟ್ ಕರೆ ನಿರ್ಬಂಧ ರದ್ದು; ವಾಟ್ಸ್‌ಆ್ಯಪ್ ಇಲ್ಲ

Update: 2017-09-21 16:19 GMT

ಜಿದ್ದಾ (ಸೌದಿ ಅರೇಬಿಯ), ಸೆ. 21: ಇಂಟರ್‌ನೆಟ್ ಮೂಲಕ ಧ್ವನಿ ಮತ್ತು ವೀಡಿಯೊ ಕರೆ ಸೌಲಭ್ಯಗಳನ್ನು ನೀಡುವ ಎಲ್ಲ ಆ್ಯಪ್‌ಗಳ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಿರುವುದಾಗಿ ಸೌದಿ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಆಯೋಗ (ಸಿಐಟಿಸಿ) ಘೋಷಿಸಿದೆ.

ದೇಶದ ನಿಯಮಾವಳಿಗಳನ್ನು ಪೂರೈಸುವ ಆ್ಯಪ್‌ಗಳು ಸೆಪ್ಟಂಬರ್ 21ರಿಂದ ಇಂಟರ್‌ನೆಟ್ ಫೋನ್ ಕರೆ ಸೌಲಭ್ಯವನ್ನು ನೀಡಬಹುದಾಗಿದೆ.

ಫೇಸ್‌ಟೈಮ್, ಸ್ನಾಪ್‌ಚಾಟ್, ಸ್ಕೈಪ್, ಲೈನ್, ಟೆಲಿಗ್ರಾಂ, ಟಾಂಗೊ ಮುಂತಾದ ಆ್ಯಪ್‌ಗಳು ಬಳಕೆದಾರರಿಗೆ ಲಭ್ಯವಿರುತ್ತವೆ.

ಆದರೆ, ವಾಟ್ಸ್‌ಆ್ಯಪ್ ಮತ್ತು ವೈಬರ್ ಆ್ಯಪ್‌ಗಳ ಸೇವೆಗಳು ಬಳಕೆದಾರರಿಗೆ ಸಿಗುತ್ತಿಲ್ಲ ಎಂದು ದೂರಲಾಗಿದೆ.

‘‘ಯಾವ ಅಗತ್ಯವನ್ನು ವಾಟ್ಸ್‌ಆ್ಯಪ್ ಪೂರೈಸಿಲ್ಲ?’’ ಎಂದು ಓರ್ವ ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News