ಸೆಪ್ಟೆಂಬರ್ 23: ಸೌದಿ ರಾಷ್ಟ್ರೀಯ ದಿನ

Update: 2017-09-22 14:00 GMT

ಸೌದಿ ಅರೇಬಿಯಾ, ಸೆ.22: ಕಿಂಗ್ ಡಂ ಆಫ್ ಸೌದಿ ಅರೇಬಿಯಾ ಸ್ಥಾಪನೆಯ ನೆನಪಿನಲ್ಲಿ ಪ್ರತಿ ವರ್ಷ ಸೆಪ್ಟಂಬರ್ 23ರಂದು ಸೌದಿ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಉದ್ಯಮ, ತೈಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸೌದಿ ಅರೇಬಿಯಾದ ಕೆಲ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

1.ಸೌದಿ ಅರೇಬಿಯಾದ ವಿಸ್ತೀರ್ಣವು 2,14,969.01 ಕಿ.ಮೀ.ಗಳಷ್ಟಿದ್ದು, ವಿಶ್ವದಲ್ಲಿಯೇ 13ನೆ ಅತಿ ದೊಡ್ಡ ರಾಷ್ಟ್ರವಾಗಿದೆ.

2.ನದಿ ಇಲ್ಲದೆ ಇರುವ ವಿಶ್ವದ ಅತೀ ದೊಡ್ಡ ರಾಷ್ಟ್ರವಾಗಿದೆ ಸೌದಿ ಅರೇಬಿಯಾ.

3.ರಿಯಾದ್ ನಲ್ಲಿ ವಿಶ್ವದ ಅತೀ ದೊಡ್ಡ ಒಂಟೆ ಮಾರುಕಟ್ಟೆಯಿದ್ದು, ಇಲ್ಲಿ ಪ್ರತಿದಿನ 100 ಒಂಟೆಗಳನ್ನು ಮಾರಲಾಗುತ್ತದೆ.

4.2018ರ ವೇಳೆಗೆ ಸೌದಿ ಅರೇಬಿಯಾದಲ್ಲಿ ವಿಶ್ವದ ಅತೀ ದೊಡ್ಡ ಕಟ್ಟದ ‘ಕಿಂಗ್ ಡಮ್ ಟವರ್’ ತಲೆಯೆತ್ತಲಿದೆ.

5.ಸೌದಿ ಅರೇಬಿಯಾದ ಮಕ್ಕಾ ಹಾಗೂ ಮದೀನಾದಲ್ಲಿ ಅತೀ ದೊಡ್ಡ ಮಸೀದಿಗಳಿವೆ. ವರ್ಷಪೂರ್ತಿ ಇಲ್ಲಿಗೆ ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.

6.ಪುರಾತನ ನಗರಗಳಲ್ಲಿ ಒಂದಾದ ಮದೈನ್ ಸಾಲೆಹ್ ಸೌದಿ ಅರೇಬಿಯಾದಲ್ಲಿದ್ದು, ವಿಶ್ವ ಪಾರಂಪರಿಕ ತಾಣವಾಗಿ ವಿಶ್ವಸಂಸ್ಥೆ ಇದನ್ನು ಗುರುತಿಸಿದೆ.

7.ಇತರ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ನೀರಿನಿಂದ ಉಪ್ಪು ತೆಗೆಯುವುದರಲ್ಲಿ ಸೌದಿ ಅರೇಬಿಯಾ ಮುಂದಿದೆ.

8.ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೂ ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ತೈಲ ಸಂಪತ್ತಿದೆ.

9.ವಿಶ್ವದಲ್ಲೇ ‘ರಬ್ ಅಲ್ ಖಾಲಿ’ ಅತೀ ದೊಡ್ಡ ನಿರಂತರ ಮರುಭೂಮಿಯಾಗಿದೆ. ಇದರ ವಿಸ್ತೀರ್ಣ 650,000 ಸ್ಕ್ವಾರ್ ಕಿಲೋಮೀಟರ್ ಗಳಷ್ಟಿದ್ದು, ಸೌದಿ ಅರೇಬಿಯಾ, ಒಮನ್, ಯುಎಇ ಹಾಗು ಯೆಮನ್ ಗಳಲ್ಲಿ ಚಾಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News