ಅಬುಧಾಬಿಯಲ್ಲಿ ನವರಾತ್ರಿ ಆಚರಣೆ ಆರಂಭ

Update: 2017-09-23 09:45 GMT

ಅಬುಧಾಬಿ, ಸೆ. 23: ಅಬುಧಾಬಿಯ ಗುಜರಾತಿ ಮಂಡಲದ ನೇತೃತ್ವದಲ್ಲಿ ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರ್‍ನಲ್ಲಿ ನವರಾತ್ರಿ ಆಚರಣೆ ಆರಂಭವಾಗಿದೆ.

 ಪ್ರತಿದಿವಸ ರಾತ್ರಿ ಒಂಬತ್ತು ಗಂಟೆಯಿಂದ ಹನ್ನೆರಡು ಗಂಟೆವರೆಗೆ ಸುದೀರ್ಘ ಕಾರ್ಯಕ್ರಮದಲ್ಲಿ ಉತ್ತರಭಾರತದ ಪರಂಪರಾಗತ ನೃತ್ಯ  ರೂಪಕಗಳು ಮತ್ತು ಸಂಗೀತ ಕಾರ್ಯಕ್ರಮಗಳು  ಇರಲಿದೆ. ವಿವಿಧ ವೇಷ ಧರಿಸಿದ ಮಹಿಳೆಯರು ಮತ್ತು ಪುರುಷರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಲಿದ್ದು, ನವರಾತ್ರಿ ಆಚರಣೆಯನ್ನು ಅವಿಸ್ಮರಣೀಯಗೊಳಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News