ದಾರುನ್ನೂರ್ ಇಂಟರ್ ನ್ಯಾಷನಲ್ ಸಿಟಿ ಶಾಖೆಯ ವಾರ್ಷಿಕ ಸಭೆ

Update: 2017-09-23 17:32 GMT

ದುಬೈ, ಸೆ. 23: ದಾರುನ್ನೂರ್ ಎಜುಕೇಷನ್ ಸೆಂಟರ್  ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾ ಚರಿಸುತ್ತಿರುವ ದಾರುನ್ನೂರ್ ಇಂಟರ್ ನ್ಯಾಷನಲ್ ಸಿಟಿ ಶಾಖೆಯ ಮೂರನೇ ವಾರ್ಷಿಕ ಸಭೆ  ಇಟಲಿ ವಿಭಾಗದಲ್ಲಿರುವ ಜಬ್ಬಾರ್ ಕಲ್ಲಡ್ಕ ಅವರ ನಿವಾಸದಲ್ಲಿ  ಸನಾವುಲ್ಲಾ ಗಡಿಯಾರ್ ಅವರ ಅದ್ಯಕ್ಷತೆಯಲ್ಲಿ  ನೆರವೇರಿತು.

ಕಾರ್ಯಕ್ರಮಕ್ಕೆ ಅವಲೋಕನ ಸಮಿತಿಯಿಂದ  ಸಲೀಂ ಅಲ್ತಾಫ್ ಫರಂಗಿಪೇಟೆ,  ಬದ್ರುದ್ದೀನ್ ಹೆಂತಾರ್,  ಅಬ್ದುಲ್ ಸಲಾಂ ಬಪ್ಪಳಿಗೆ,  ಉಸ್ಮಾನ್ ಕೆಮ್ಮಿಂಜೆ ಮೊದಲಾದವರು ಆಗಮಿಸಿದ್ದರು.

ಕಾರ್ಯಕ್ರಮವು ದುಆ ದೊಂದಿಗೆ ಆರಂಭಗೊಂಡಿತು. ಪ್ರಧಾನ ಕಾರ್ಯದರ್ಶಿ  ಅಬ್ದುಲ್ ರಝಾಕ್ ಕಾರಾಯಿ ಸ್ವಾಗತಿಸಿದರು.  ನಾಸಿರ್ ಕಲ್ಲಡ್ಕ  ಕಿರಾ ಅತ್ ಪಠಿಸಿದರು.  ಶಾಫಿ ಕಂದಲ್  ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ  ಅಬ್ದುಲ್ ರಝಾಕ್ ಕಾರಾಯಿ ವಿವರಿಸಿದರು.

ಬಳಿಕ  ಸಲೀಂ ಅಲ್ತಾಫ್ ಫರಂಗಿಪೇಟೆಯವರು ವ್ಯಕ್ತಿ ಪರಿಚಯವನ್ನು ಮಾಡಿಸಿದರು.  ದಾರುನ್ನೂರ್ ಇದರ ಡೋಕ್ಯು ಮೆಂಟರಿಯನ್ನು ಪ್ರದರ್ಶಿಸಲಾ ಯಿತು. ಅಲ್ತಾಫ್ ಮಾತನಾಡಿ ಇಂದಿನ ಪ್ರಸಕ್ತ ಸನ್ನಿವೇಶದಲ್ಲಿ ದಾರುನ್ನೂರಿನ ಆವಶ್ಯಕತೆಯನ್ನು ವಿವರಿಸಿದರು.

ದಾರುನ್ನೂರಿನ ಕಾರ್ಯ ಚಟುವಟಿಕೆಗಳ ವಿವರ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಅದರ ಏಳಿಗೆಗಾಗಿ ದುಡಿಯುವ ಕರಾವಳಿಯ ಯುವಕರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿ  ಬದ್ರುದ್ದೀನ್ ಹೆಂತಾರ್  ಮಾತನಾಡಿದರು.

ಸನಾವುಲ್ಲಾ ಗಡಿಯಾರ್ ಒಂದು ವರ್ಷದಲ್ಲಿ  ಉತ್ತಮ ಸಾಧನೆಯನ್ನು  ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿ ಕೊಟ್ಟರು. ಉಸ್ಮಾನ್ ಕೆಮ್ಮಿಂಜೆ ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ವಹಿಸಿಕೊಂಡರು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಹಸನ್ ಬಾವ ಕಲ್ಲಡ್ಕ, ಅಧ್ಯಕ್ಷರಾಗಿ  ಯೂನುಸ್ ತಲಪಾಡಿ,  ಉಪಾಧ್ಯಕ್ಷರಾಗಿ ಶಫೀಕ್ ಗಡಿಯಾರ್,  ಮಹಮ್ಮದ್ ಅಲಿ ಕಲ್ಲಡ್ಕ,  ಅಬ್ದುಲ್ ರಝಾಕ್ ರೆಂಜ, ಪ್ರಧಾನ ಕಾರ್ಯದರ್ಶಿ ಶಾಫಿ ಕಂದಲ್, ಕಾರ್ಯದರ್ಶಿಗಳಾಗಿ ಜಬ್ಬಾರ್ ಕಲ್ಲಡ್ಕ,  ನಾಸಿರ್ ಕಲ್ಲಡ್ಕ, ಅನ್ಸಾರ್ ರೆಂಜ, ಕೋಶಾಧಿಕಾರಿ  ಸನಾವುಲ್ಲಾ ಗಡಿಯಾರ್, ಸಂಘಟನಾ ಕಾರ್ಯದರ್ಶಿ  ರಿಯಾಝ್ ಕಂಡಿಗ, ಕನ್ವೀನರ್ ಗಳು ಅಮೀನ್ ಮೈಸೂರ್,  ಅನ್ಸಾರ್ ಗಡಿಯಾರ್ , ನಿಝಾರ್ ನಾರ್ಷ, ಲತೀಫ್ ಕಾಂತಡ್ಕ,  ನೌಶಾದ್ ಮಂಜೇಶ್ವರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ  ಸಿದ್ದೀಕ್ ಕಬಕ, ಜನಾಬ್ ಇಸ್ಮಾಯಿಲ್ ಕಲ್ಲಡ್ಕ,  ಇರ್ಶಾದ್ ನಂದಾವರ,  ರಹೀಮ್ ಕಲ್ಲಡ್ಕ,  ಶಮೀರ್ ಅಡ್ಯಾರ್ ಕಣ್ಣೂರ್ ,  ಫಯಾಝ್ ಕಲ್ಲಡ್ಕ ,  ಫೈಝಲ್ ಕಾಂತಡ್ಕ,  ಶಾಫಿ ಕಾಂತಡ್ಕ,  ಮುಸ್ತಫಾ ಕೆದಿಲ,  ಶಮೀಝ್ ಕಲ್ಲಡ್ಕ,  ಆರಿಫ್ ಕಲ್ಲಡ್ಕ ,  ಮುಸ್ತಫಾ ಕಂಡಿಗ ,  ಲತೀಫ್ ಕಂಡಿಗ  ಮೊದಲಾದವರನ್ನು ಆರಿಸಲಾಯಿತು.

ನಾಸಿರ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News