ಮ್ಯಾನ್ಮಾರ್ ದೌರ್ಜನ್ಯಕ್ಕೆ ಸೌದಿ ಖಂಡನೆ

Update: 2017-09-24 15:09 GMT

ಸೌದಿ ಅರೇಬಿಯ, ಸೆ. 24: ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ನಡೆಸಿಕೊಳ್ಳುತ್ತಿರುವ ರೀತಿಯನ್ನು ಸೌದಿ ಅರೇಬಿಯ ಖಂಡಿಸಿದೆ.

‘‘ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾ ಅಲ್ಪಸಂಖ್ಯಾತರ ಬಗ್ಗೆ ಅನುಸರಿಸುತ್ತಿರುವ ದೌರ್ಜನ್ಯ ನೀತಿ ಹಾಗೂ ಅವರ ಬಲವಂತದ ವಲಸೆಯಿಂದ ನನ್ನ ದೇಶ ಕಳವಳಗೊಂಡಿದೆ ಹಾಗೂ ಈ ಕೃತ್ಯಗಳನ್ನು ಖಂಡಿಸುತ್ತದೆ’’ ಎಂದು ಸೌದಿ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News