ಕೆಸಿಎಫ್: ಯು.ಎ.ಇ. ರಾಷ್ಟ್ರೀಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Update: 2017-09-24 18:25 GMT

ದುಬೈ, ಸೆ. 24: ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆ.ಸಿ.ಎಫ್.) ಇದರ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಉಮ್ಮುಲ್ ಖುವೈನ್ "ಅಲ್ ಮನಾಮಾ ಆಡಿಟೋರಿಯಂ" ನಲ್ಲಿ ನಡೆಯಿತು. ಈ ಸಂದರ್ಭ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಎಮ್ಮೆಸ್ಸೆಂ ಅಬ್ದುಲ್ ರಶೀದ್  ಝೈನಿ ಕಾಮಿಲ್ ಚುನಾವಣಾ ಪ್ರಕ್ರಿಯೆಗೆ ನೇತೃತ್ವ ನೀಡಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಪುನರಾಯ್ಕೆಯಾದರು,  ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಇಕ್ಬಾಲ್ ಕಾಜೂರು ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ಇಲಾಖೆಗಳ ಅಧ್ಯಕ್ಷ ಮತ್ತು ಸಂಚಾಲಕರನ್ನು ಈ ಸಂದರ್ಭ ನೇಮಿಸಲಾಯಿತು. 

ಸಂಘಟನೆ- ಮೂಸಾ ಹಾಜಿ ಬಸರ ಮಂಜನಾಡಿ, ಕೆ.ಎಚ್. ಮುಹಮ್ಮದ್ ಕುಂಞಿ ಸಖಾಫಿ ಈಶ್ವರಮಂಗಲ, ಶಿಕ್ಷಣ- ಅಬ್ದುಲ್ ರಹೀಂ ಕೋಡಿ, ಮುಹಮದ್ ರಫೀಕ್ ಜೆಪ್ಪು, ಆಡಳಿತ- ಕೆ.ಕೆ.ಉಸ್ಮಾನ್ ಹಾಜಿ ನಾಪೊಕ್ಲು, ರಿಯಾಝ್ ಕೊಂಡಂಗೇರಿ, ಪ್ರಕಾಶನ- ಹಾಜಿ ಝೈನುದ್ದೀನ್ ಬೆಳ್ಳಾರೆ, ಅಬ್ದುಲ್ ಕರೀಂ ಮುಸ್ಲಿಯಾರ್ ಉರುವಾಲ್ ಪದವು, ಸಾಂತ್ವನ- ಇಬ್ರಾಹಿಂ ಬ್ರೈಟ್ ಮಾರ್ಬಲ್ ವಿಟ್ಲ, ಶರೀಫ್ ಸಾಲೆತ್ತೂರ್, ಇಹ್ಸಾನ್ - ಹಾಜಿ ಅಬ್ದುಲ್ಲ ನಲ್ಕ, ಅಬ್ದುಲ್ ಖಾದರ್ ಸಅದಿ ಸುಳ್ಯ, ಸಾರ್ವಜನಿಕ ಸಂಪರ್ಕ -ಅಬ್ದುಲ್ ಕರೀಮ್ ಹಾಜಿ ಬಿಕರ್ನಕಟೆ, ಶಕೂರು ಮನಿಲಾ ಹಾಗೂ ಸಮಿತಿಯ ಸದಸ್ಯರುಗಳಾಗಿ ಹಸೈನಾರ್ ಅಮಾನಿ ಅಜ್ಜಾವರ, ಹಕೀಮ್ ತುರ್ಕಳಿಕೆ, ದಾವೂದ್ ಮಾಸ್ಟರ್, ಅಬ್ದುಲ್ ಅಝೀಝ್ ಅಹ್ಸನಿ, ರಫೀಕ್ ಕಲ್ಲಡ್ಕ, ಮುಹಮದ್ ಅಲಿ ಬ್ರೈಟ್, ಶಾಹುಲ್ ಹಮೀದ್ ಸಖಾಫಿ, ಹಾಜಿ ನಝೀರ್ ಕೆಮ್ಮಾರ, ಹುಸೈನ್ ಇನೋಳಿ, ಖಲೀಲ್ ಭಾಷಾ ಮಡಿಕೇರಿ, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು, ಇರ್ಷಾದ್ ಕೊಂಡಂಗೇರಿ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಹಾಜಿ ಅಬೂಬಕರ್ ಕೊಟ್ಟಮುಡಿ, ಅರಫಾತ್ ನಾಪೋಕ್ಲು, ಅಬೂಸಾಲಿ ಸಖಾಫಿ ಇನೋಳಿ, ರಜಬ್ ಉಚ್ಚಿಲ, ಮಹಬೂಬ್ ಸಖಾಫಿ ಕಿನ್ಯ, ಶಾಫಿ ಸಖಾಫಿ ಕೊಂಡಂಗೇರಿ, ಅಕ್ರಂ ಬಿಸಿರೋಡ್, ಆದಂ ಈಶ್ವರಮಂಗಿಲ, ಮುಸ್ತಫಾ ತುಂಬೆ, ಮುಸ್ತಫಾ ಮುದುಂಗರ್, ರಝಾಕ್ ಹಾಜಿ ನಾಟೆಕಲ್, ರಝಾಕ್ ಹಾಜಿ ಜೆಲ್ಲಿ, ಕಬೀರ್ ಬಾಯಂಬಾಡಿ, ಅಬೂಬಕರ್ ಮದನಿ ಅಜ್ಮಾನ್, ಹಸನ್ ಕಂಬಳಬೆಟ್ಟು ಅವರುಗಳನ್ನು ನೇಮಿಸಲಾಯಿತು. 

ಸಮಾವೇಶವನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಉದ್ಘಾಟಿಸಿದರು. ಅಬ್ದುಲ್ ಹಮೀದ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಸಂಚಾಲಕ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸಂಘಟನೆಯ ಕುರಿತು ಮಾಹಿತಿ ನೀಡಿದರು. ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ ಮಂಗಳೂರು, ಕಾರ್ಯದರ್ಶಿ ಪಿ.ಎಂ.ಎಚ್.ಅಬ್ದುಲ್ ಹಮೀದ್ ಶುಭ ಹಾರೈಸಿದರು.  ಉಸ್ಮಾನ್ ಹಾಜಿ  ನಾಪೊಕ್ಲು ಸ್ವಾಗತಿಸಿ, ಇಕ್ಬಾಲ್ ಕಾಜೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News