ಮರ್ಕಝುಲ್ ಹುದಾ ಯುಎಇ ಸಮಿತಿಯ ಮಹಾಸಭೆ

Update: 2017-09-25 07:36 GMT

ಅಬುಧಾಬಿ, ಸೆ.25: ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚಿಗೆ ಅಬುಧಾಬಿಯ ಮುಸಫ್ಫ ಅಲ್ ಮಿದ್ ಹಾ ಸಭಾಂಗಣದಲ್ಲಿ ನಡೆಯಿತು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಅಧ್ಯಕ್ಷ ತೆ ವಹಿಸಿದ್ದರು.

ಸಭೆಯಲ್ಲಿ ಸಮಿತಿಯ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಅಧ್ಯಕ್ಷರಾಗಿ ಮುಹಮ್ಮದ್‌ ಶಕೂರ್ ಮಣಿಲ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಹಾಜಿ ಕೆಮ್ಮಾರ, ಕೋಶಾಧಿಕಾರಿಯಾಗಿ ಹಾಜಿ ಬಶೀರ್ ಬೊಳುವಾರ್, ಉಪಾಧ್ಯಕ್ಷರಾಗಿ ಅಲ್ಹಾಜ್ ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್, ಹಾಜಿ ಅಬ್ದುಲ್ಲಾ ನಲ್ಕ, ಹಾಜಿ ಅಬ್ದುರ್ರಝಾಕ್ ಮಣಿಲ, ಹಾಜಿ ಅಬ್ದುಲ್ ರಝಾಕ್ ಜೆಲ್ಲಿ, ಮುಹಮ್ಮದ್ ಇಕ್ಬಾಲ್ ಕಾಜೂರು, ಇಬ್ರಾಹೀಂ ಬ್ರೈಟ್ ಮಾರ್ಬಲ್, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಸಂಪ್ಯ, ನಿರ್ವಾಹಕ ಕಾರ್ಯದರ್ಶಿಯಾಗಿ ಉಮರ್ ಕಾಣಿಯೂರು, ಕಾರ್ಯದರ್ಶಿಗಳಾಗಿ ಮುಹಮ್ಮದ್ ಕಮಾಲ್ ಅಜ್ಜಾವರ, ಅಬ್ದುಲ್ ರಝಾಕ್ ಬುಸ್ತಾನಿ ಪರ್ಲಡ್ಕ, ಹಸನ್ ಕಂಬಳಬೆಟ್ಟು, ಶಾಫಿ ಸಖಾಫಿ ಕರಿಂಬಿಲ, ಸಲಹಾ ಮಂಡಳಿಯ ಅಧ್ಯಕ್ಷರಾಗಿ ಹಾಜಿ ಶೇಖ್ ಬಾವ ಮಂಗಳೂರು, ಸಲಹೆಗಾರರಾಗಿ ಪಿ.ಎಂ.ಎಚ್.ಅಬ್ದುಲ್ ಹಮೀದ್ ಈಶ್ವರಮಂಗಿಲ, ಹಾಜಿ ಮುಹಮ್ಮದ್ ಅಲಿ ವಳವೂರು ಆಯೆ್ಕಯಾದರು.

ಸಭೆಯನ್ನು ಕೆಸಿಎಫ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಕ್ ಬಾವ ಉದ್ಘಾಟಿಸಿದರು. ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್ ದುಆ ನೆರವೇರಿಸಿದರು. ಶಕೂರ್ ಮಣಿಲ ಸ್ವಾಗತಿಸಿದರು. ರಫೀಕ್ ಸಂಪ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News