ಅಲ್ ಕೋಬಾರ್ : ​ಕೆಸಿಎಫ್ "ಮುಹರ್ರಮ್ ಸಂದೇಶ" ಸಮಾರಂಭ

Update: 2017-09-26 16:20 GMT

ಅಲ್ ಕೋಬಾರ್,ಸೆ.26 : ಕೆಸಿಎಫ್ ದಮ್ಮಾಮ್ ಝೋನ್ "ಅಹ್ಲನ್ ಬಿಕ ಯಾ ಮುಹರ್ರಮ್" ಕಾರ್ಯಕ್ರಮ ಝೋನ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದೆ ಇದರ ಅಲ್ ಕೋಬಾರ್ ಸೆಕ್ಟರ್ ವತಿಯಿಂದ ಮುಹರ್ರಮ್ ಸಂದೇಶ  ಸಮಾರಂಭ ಅಲ್ ಕೋಬಾರ್ ಸೆಕ್ಟರ್ ಹಾಲ್ ನಲ್ಲಿ ಜರುಗಿತು. 

ಸೆಕ್ಟರ್ ಅಧ್ಯಕ್ಷರು ಅಬ್ದುಲ್ ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಂದೇಶ ಭಾಷಣ ಎಂ ಕೆ ಎಂ ಅಬೂಬಕ್ಕರ್ ಮದನಿ ಹೊಸಂಗಡಿ ಮಾಡಿದರು.  ಸಮಾರಂಭದಲ್ಲಿ ಕೆಸಿಎಫ್ ದಮ್ಮಾಮ್ ಝೋನ್  ಶಿಕ್ಷಣ ವಿಭಾಗ ಚೇರ್ಮಾನ್ ಅಬ್ದುಲ್ ರಶೀದ್ ಸಖಾಫಿ. ಮುಹಮ್ಮದ್ ಮದನಿ ಆತೂರು. ಅಬ್ದುಲ್ ಲತೀಫ್ ಮದನಿ ಕಾಜೂರು. ಉಪಸಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಲೀಲ್ ಕೆಸಿರೋಡ್ ಸ್ವಾಗತಿಸಿ ನೌಫಲ್ ಹೆಚ್.ಕೆ ಉಜಿರೆಬೆಟ್ಟು ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News