ದುಬೈ: ದಾರುನ್ನೂರ್ ಅಲ್ ಸತ್ವಾ ಶಾಖೆಯ ವಾರ್ಷಿಕ ಸಭೆ

Update: 2017-09-30 16:58 GMT

ದುಬೈ, ಸೆ. 30: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ  ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಅಲ್ ಸತ್ವಾ ಶಾಖೆಯ 2ನೆ ವಾರ್ಷಿಕ ಸಭೆಯು ಸತ್ವಾ ಶಾಖೆಯ ಗೌರವಾಧ್ಯಕ್ಷ ಬಶೀರ್ ಬಂಟ್ವಾಲ್ ಅವರ ನಿವಾಸದಲ್ಲಿ ನೆರವೇರಿತು.

ಅವಲೋಕನ ಸಮಿತಿಯ ಪ್ರಮುಖರಾದ  ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್,  ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ದುಆ  ಬಳಿಕ  ರಶೀದ್ ಬಿಕರ್ಣಕಟ್ಟೆ  ಸ್ವಾಗತಿಸಿ, ಮಾತನಾಡಿದರು. ಬಳಿಕ  ಅಬ್ದುಲ್ ಸಲಾಂ ಬಪ್ಪಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸತ್ವಾ ಸಮಿತಿಯ ಸಹಕಾರ ಮತ್ತು ಧಾರ್ಮಿಕ ಮನೋಭಾವವನ್ನು ಅಭಿನಂದಿಸಿದರು.

ವಾರ್ಷಿಕ ವರದಿಯನ್ನು ಉಪಾಧ್ಯಕ್ಷ  ತಾಜುದ್ದೀನ್ ಬೈರಿಕಟ್ಟೆಯವರು ವಾಚಿಸಿದರು. ವಾರ್ಷಿಕ ಕಾರ್ಯಾಚಟುವಟಿಕೆಯ ವಿವರವನ್ನು ಅಧ್ಯಕ್ಷ  ಅಶ್ರಫ್ ಬಾಂಬಿಲ ನೀಡಿ ಬಳಿಕ ಮಾತನಾಡುತ್ತಾ ದಾರುನ್ನೂರ್ ಭವಿಷ್ಯದಲ್ಲಿ ಒಂದು ವಿಶ್ವ ವಿದ್ಯಾಲಯವಾಗಿ ಮಾರ್ಪಾಡುವಂತಾಗಲು ನಮ್ಮೆಲ್ಲರ ಸಹಕಾರ ಮತ್ತು ಪ್ರಾರ್ಥನೆ ಮುಖ್ಯ. ಅದಕ್ಕಾಗಿ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿ, ನೂತನ ಸಮಿತಿ ರಚನೆಗೆ ಅನುವು ಮಾಡಿ ಕೊಟ್ಟರು.

ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಬದ್ರುದ್ದೀನ್ ಹೆಂತಾರ್ ನಿರ್ವಹಿಸಿದರು.

ಗೌರವಾಧ್ಯಕ್ಷರಾಗಿ ಬಶೀರ್ ಬಂಟ್ವಾಲ್, ಅಧ್ಯಕ್ಷರಾಗಿ ಅಶ್ರಫ್ ಬಾಂಬಿಲ, ಉಪಾಧ್ಯಕ್ಷರಾಗಿ ರಶೀದ್ ಬಿಕರ್ಣಕಟ್ಟೆ, ತಾಜುದ್ದೀನ್ ಬೈರಿಕಟ್ಟೆ, ಸಫ್ವಾನ್ ಕೆಮ್ಮಾರ, ಪ್ರಧಾನ ಕಾರ್ಯದರ್ಶಿಯಾಗಿ ಜವಾದ್ ಪೊಳಲಿ, ಕಾರ್ಯದರ್ಶಿಗಳಾಗಿ  ಇಫ್ತಿಕಾರ್ ಮೂಡಬಿದ್ರಿ,  ತಂಝೀಲ್ ಉಳ್ಳಾಲ, ಸಿದ್ದೀಕ್ ಸುಂಕದಕಟ್ಟೆ,

ಕೋಶಾಧಿಕಾರಿ ಆರಿಫ್ ಮಂಗಳೂರು, ಸಂಘಟನ ಕಾರ್ಯದರ್ಶಿಯಾಗಿ ರಿಝ್ವಾನ್ ಮೆಲ್ಕಾರ್, ಕನ್ವೀನರ್ ಗಳಾಗಿ ಇಮ್ತಿಯಾಝ್ ಪುತ್ತೂರು,  ಯೂನುಸ್ ಭಟ್ಕಲ್, ಅಮೀರ್ ಭಟ್ಕಲ್, ಸಂಶೀರ್ ಕೆ.ಸಿ ರೋಡ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಯಾಸೀನ್ ಶಿರಾಲಿ,  ಸುಲೈಮಾನ್ ಭಟ್ಕಲ್, ಮುಸ್ತಫಾ ಬಿ.ಸಿ.ರೋಡ್,  ಅಂಜದ್ ಮಂಗಳೂರು,  ಮಹಮ್ಮದ್ ಶಾಕಿರ್ ವೇಣೂರ್,  ಜಾವಿದ್ ಮಂಗಳೂರು,  ಅಸ್ಕರ್ ಅಲಿ ಬಿ.ಸಿ ರೋಡ್,  ಅಫ್ತಾಬ್ ಕಿನ್ನಿಗೋಳಿ, ರಿಝ್ವಾನ್ ಚಿಕ್ಕಮಗಳೂರು,  ಜಾವೆದ್ ಉಳ್ಳಾಲ,  ಇಸಾಕ್ ಕಾಶಿಪಟ್ಣ ,  ಮುಝಮ್ಮಿಲ್ ಬಿ.ಸಿ ರೋಡ್, ನಝೀರ್ ಉಪ್ಪಿನಂಗಡಿ,  ಶಹಾಲ್ ಮೂಡಬಿದ್ರಿ, ನಝೀರ್ ಕಾರಾಜೆ ಆಯ್ಕೆಯಾದರು.

ಜವಾದ್ ಪೊಳಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News