ಯುಎಇ: ತಂಬಾಕು, ಎನರ್ಜಿ ಡ್ರಿಂಕ್‌ಗಳಿಗೆ ಶೇ.100 ತೆರಿಗೆ

Update: 2017-10-01 16:21 GMT

ದುಬೈ,ಆ.1: ತಂಬಾಕು ಉತ್ಪನ್ನಗಳು, ಶಕ್ತಿವರ್ಧಕ ಪೇಯ (ಎನರ್ಜಿ ಡ್ರಿಂಕ್ಸ್) ಹಾಗೂ ಲಘುಪಾನೀಯಗಳ ಮೇಲೆ ನೂತನ ‘ಪಾಪ’ ತೆರಿಗೆ (ಸಿನ್‌ಟ್ಯಾಕ್ಸ್) ಗಳನ್ನು ಯುಎಇ ರವಿವಾರದಿಂದ ಸಂಗ್ರಹಿಸ ತೊಡಗಿದೆ.

  ಇಂದಿನಿಂದ ತಂಬಾಕು ಹಾಗೂ ಶಕ್ತಿವರ್ಧಕ ಪಾನೀಯಗಳ ಮೇಲೆ ಶೇ.100 ಹಾಗೂ ಲಘು ಪಾನೀಯಗಳ ಮೇಲೆ ಶೇ.50ರಷ್ಟು ತೆರಿಗೆಯನ್ನು ವಿಧಿಸಲಾಗುವುದು.

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿರುವಂತೆಯೇ, ಯುಎಇ ತಂಬಾಕು, ಲಘುಪಾನೀಯ ಹಾಗೂ ಶಕ್ತಿವರ್ಧಕ ಪೇಯಗಳ ಮೇಲೆ ನೂತನ ತೆರಿಗೆಯನ್ನು ಜಾರಿಗೊಳಿಸಿದೆ.ಜನವರಿಯಿಂದ ಯುಎಇ ಕೆಲವು ನಿರ್ದಿಷ್ಟ ಸಾಮಗ್ರಿಗಳ ಮೇಲೆ ಶೇ.5ರಷ್ಟು ವೌಲ್ಯವರ್ಧಿತ ತೆರಿಗೆ (ವ್ಯಾಟ್)ವಿಧಿಸಲು ನಿರ್ಧರಿಸಿತೆ.

ಗಲ್ಫ್ ಸಹಕಾರ ಮಂಡಳಿಯ ಎಲ್ಲಾ ಆರು ಸದಸ್ಯ ರಾಷ್ಟ್ರಗಳು ಮುಂದಿನ ಜನವರಿಯಿಂದ ವ್ಯಾಟ್ ಜಾರಿಗೊಳಿಸಲು ಸಮ್ಮತಿಸಲಿವೆ. ಬಹರೈನ್, ಕುವೈತ್, ಓಮನ್,ಕತರ್, ಸೌದಿ ಆರೇಬಿಯ ಹಾಗೂ ಯುಎಇ, ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News